ಸಂಸತ್ ಕಟ್ಟಡ ಅಸುರಕ್ಷಿತ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಲೋಕೋಪಯೋಗಿ ಇಲಾಖೆ
Update: 2020-07-21 22:11 IST
ಹೊಸದಿಲ್ಲಿ, ಜು. 21: ಈಗಿರುವ ಸಂಸತ್ತು ಕಟ್ಟಡ ರಚನಾತ್ಮಕವಾಗಿ ಸುರಕ್ಷಿತವಲ್ಲ. ಅಲ್ಲದೆ, ಹಲವು ರೀತಿಯಲ್ಲಿ ಇಕ್ಕಟ್ಟು ಹಾಗೂ ಅಸಮರ್ಪಕತೆಯಿಂದ ಕೂಡಿದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇದರ ಪಕ್ಕದಲ್ಲೇ ದೇಶಿ ತಂತ್ರಜ್ಞಾನ, ಜ್ಞಾನವನ್ನು ಪ್ರತಿಬಿಂಬಿಸುವ, ಭಾರತದ ತಜ್ಞರಿಂದ ನೂತನ ಸಂಸತ್ ಕಟ್ಟಡವನ್ನು ನಿರ್ಮಿಸುವ ಅಗತ್ಯತೆ ಇದೆ ಎಂದು ಅದು ಹೇಳಿದೆ. ಹೊಸ ಕಟ್ಟಡದಲ್ಲಿ ದೊಡ್ಡ ಸಂಸತ್ ಭವನ ಇರಲಿದೆ. ದೊಡ್ಡ ಸಂಸತ್ತಿಗೆ ಬೇಕಾದ ಹೆಚ್ಚುವರಿ ಸೀಟುಗಳನ್ನು ನಿರ್ಮಿಸಲು ಈಗಿರುವ ಕಟ್ಟಡವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.
ಅಸ್ತಿತ್ವದಲ್ಲಿರುವ ಯಾವುದೇ ಪಾರಂಪರಿಕ ಕಟ್ಟಡವನ್ನು ಧ್ವಂಸಗೊಳಿಸುವ ಯಾವುದೇ ಯೋಜನೆ ಇಲ್ಲ. ಬದಲಾಗಿ ಈ ಕಟ್ಟಡವನ್ನು ಉನ್ನತೀಕರಿಸ ಲಾಗುವುದು. ಅಲ್ಲದೆ, ಸೆಂಟ್ರಲ್ ವಿಸ್ಟಾವನ್ನು ಪರಿವರ್ತಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.