‘ಬೇಜವಾಬ್ದಾರಿಯುತ ಸುಳ್ಳು’: ‘ಟೈಮ್ಸ್ ನೌ’ ವಿರುದ್ಧ ಅಮಿತಾಬ್ ಬಚ್ಚನ್ ಆಕ್ರೋಶ

Update: 2020-07-23 14:32 GMT

ಹೊಸದಿಲ್ಲಿ: ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 12 ದಿನಗಳ ಚಿಕಿತ್ಸೆಯ ನಂತರ ಅಮಿತಾಬ್ ಬಚ್ಚನ್ ಕೋವಿಡ್ 19 ನೆಗೆಟಿವ್ ಆಗಿದ್ದಾರೆ ಎನ್ನುವ ‘ಟೈಮ್ಸ್ ನೌ’ ವರದಿಯನ್ನು ಸ್ವತಃ ಅಮಿತಾಬ್ ಬಚ್ಚನ್ ಅವರೇ ನಿರಾಕರಿಸಿದ್ದಾರೆ.

ಟೈಮ್ಸ್ ನೌ ವರದಿಯನ್ನು ಪೋಸ್ಟ್ ಮಾಡಿರುವ ಅವರು , “ಇದು ತಪ್ಪಾದ, ಬೇಜವಾಬ್ದಾರಿಯುತ, ನಕಲಿ ಮತ್ತು ಸುಳ್ಳು” ಎಂದು ಟ್ವೀಟ್ ಮಾಡಿದ್ದಾರೆ.

ಅಮಿತಾಬ್ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಕೊರೋನ ಸೋಂಕಿಗೊಳಗಾಗಿರುವುದು ಇತ್ತೀಚೆಗಷ್ಟೇ ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News