×
Ad

ರಾಜಸ್ಥಾನ: ಬಹುಮತ ಸಾಬೀತಿಗೆ ಕಾಂಗ್ರೆಸ್ ಚಿಂತನೆ

Update: 2020-07-23 20:30 IST

 ಹೊಸದಿಲ್ಲಿ, ಜು. 23: ಅನರ್ಹತೆ ನೋಟಿಸ್ ಜಾರಿಗೊಳಿಸಿದ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ನೇತೃತ್ವದ 18 ಮಂದಿ ಶಾಸಕರ ಮನವಿಯನ್ನು ರಾಜಸ್ಥಾನ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸುವುದರ ಮಧ್ಯೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬಳಿಕ, ಕಾಂಗ್ರೆಸ್ ವಿಧಾನ ಸಭೆಯಲ್ಲಿ ಬಹು ಮತ ಸಾಬೀತುಪಡಿಸಲು ಚಿಂತಿಸುತ್ತಿದೆ.

‘‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತವಿದೆ. ಇದರ ಬಗ್ಗೆ ನಮಗೆ ಯಾವುದೇ ಅನುಮಾನ ಇಲ್ಲ. ಪ್ರತಿಪಕ್ಷಕ್ಕಿಂತ 15ರಿಂದ 20 ಅಧಿಕ ಶಾಸಕರು ನಮ್ಮಲ್ಲಿದ್ದಾರೆ’’ ಎಂದು ಪಕ್ಷದ ವಿಶೇಷ ಪರಿವೀಕ್ಷಕ ಮಾಕನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದ ಯುದ್ಧ ರಾಜಕೀಯ ಯುದ್ಧವೇ ಹೊರತು ಕಾನೂನು ಯುದ್ಧ ಅಲ್ಲ. ಅಲ್ಲದೆ, ಈ ಸಂದರ್ಭ ನಮ್ಮ ಪರವಾದ ತೀರ್ಪನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News