ಸೆಲೆಬ್ರಿಟಿಗಳ ‘ಫೇಕ್ ಫಾಲೋವರ್’ ಹಗರಣ: ಬಾಲಿವುಡ್ ನ ಈ ಇಬ್ಬರು ಪ್ರಸಿದ್ಧ ನಟಿಯರನ್ನು ಪ್ರಶ್ನಿಸಲಿದ್ದಾರೆ ಪೊಲೀಸರು?

Update: 2020-07-23 16:16 GMT

ಹೊಸದಿಲ್ಲಿ: ‘ನಕಲಿ ಫಾಲೋವರ್’ ಹಗರಣಕ್ಕೆ ಸಂಬಂಧಿಸಿ ಹಲವು ಸೆಲೆಬ್ರಿಟಿಗಳು ಪೊಲೀಸರ ಪಟ್ಟಿಯಲ್ಲಿದ್ದು, ಬಾಲಿವುಡ್ ನ ಪ್ರಸಿದ್ಧ ನಟಿಯರಾದ ಪ್ರಿಯಾಂಕಾ ಛೋಪ್ರಾ ಮತ್ತು ದೀಪಿಕಾ ಪಡುಕೋಣೆಯವರನ್ನು ಪೊಲೀಸರು ಪ್ರಶ್ನಿಸುವ ಸಾಧ್ಯತೆ ಇದೆ ಎಂದು ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಂತಾರಾಷ್ಟ್ರೀಯ ಕಂಪೆನಿಗಳನ್ನೊಳಗೊಂಡ ಈ ಹಗರಣದಲ್ಲಿ ಹಲವು ಪ್ರಮುಖರು, ಬಿಲ್ಡರ್ ಗಳು ಮತ್ತು ಕ್ರೀಡಾಪಟುಗಳು , ಸೆಲೆಬ್ರಿಟಿಗಳು ಒಳಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಪಟ್ಟಿಯಲ್ಲಿ ಪ್ರಿಯಾಂಕಾ ಮತ್ತು ದೀಪಿಕಾ ಪಡುಕೋಣೆಯವರೂ ಇದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಈ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದೆ. ಅಭಿಷೇಕ್ ದಿನೇಶ್ ದೌಡೆ ಎಂಬಾತನನ್ನು ನಕಲಿ ಖಾತೆ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಕಲಿ ಖಾತೆಗಳ ಮೂಲಕ ಫಾಲೋವರ್ ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮಾಡಲು ಈ ಹಗರಣ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News