ಅಗತ್ಯಬಿದ್ದರೆ ರಾಷ್ಟ್ರಪತಿ ಭವನಕ್ಕೆ ಹೋಗುತ್ತೇವೆ, ಪ್ರಧಾನಿ ನಿವಾಸದೆದುರು ಧರಣಿಗೂ ಸಿದ್ಧ: ಗೆಹ್ಲೋಟ್

Update: 2020-07-25 12:23 GMT

ಜೈಪುರ್: ವಿಧಾನಸಭಾ ಅಧಿವೇಶನ ಕರೆಯಬೇಕೆಂಬ ಬೇಡಿಕೆಯೊಂದಿಗೆ ರಾಜ್ಯಪಾಲರ ಅಧಿಕೃತ ನಿವಾಸ ರಾಜ್ ಭವನ್ ‍ನ ಹುಲ್ಲುಹಾಸಿನಲ್ಲಿ ಪ್ರತಿಭಟನೆ ನಡೆಸಿದ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ‘ಬಿಜೆಪಿ ಷಡ್ಯಂತ್ರ'ವನ್ನು ಸೋಲಿಸಲು ರಾಷ್ಟ್ರಪತಿ ಭವನಕ್ಕೆ ತೆರಳಲು ಹಾಗೂ ಪ್ರಧಾನಿ ನಿವಾಸದ ಹೊರಗೆ ಧರಣಿ ನಡೆಸಲು ಕೂಡ ಸಿದ್ಧ ಎಂದಿದ್ದಾರೆ.

“ಬಿಜೆಪಿಯ ಷಡ್ಯಂತ್ರ ಯಶಸ್ವಿಯಾಗಲು ನಾವು ಬಿಡುವುದಿಲ್ಲ. ಅಗತ್ಯಬಿದ್ದರೆ ನಾವು ರಾಷ್ಟ್ರಪತಿ ಭವನಕ್ಕೆ ತೆರಳುತ್ತೇವೆ ಹಾಗೂ  ಪ್ರಧಾನಿ ನಿವಾಸದ ಹೊರಗೆ ಕೂಡ ಧರಣಿ ನಡೆಸಲು ಸಿದ್ಧರಿದ್ದೇವೆ'' ಎಂದು  ಇಂದು ಅಪರಾಹ್ನ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೆಹ್ಲೋಟ್ ಹೇಳಿದ್ದಾರೆಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ವಿಧಾನಸಭಾ ಅಧಿವೇಶನ ಕರೆಯಬೇಕೆಂಬ ಇನ್ನೊಂದು ಮನವಿಯೊಂದಿಗೆ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಮುಖ್ಯಮಂತ್ರಿ ಮಗದೊಮ್ಮೆ ಭೇಟಿಯಾಗುವುದಕ್ಕಿಂತ ಮುಂಚೆ ಈ ಬೆಳವಣಿಗೆ  ನಡೆದಿದೆ.

‘ಮೇಲಿನಿಂದ ಒತ್ತಡ’ ಇರುವುದರಿಂದ ರಾಜ್ಯಪಾಲರು ವಿಧಾನಸಭಾ ಅಧಿವೇಶನ ಕರೆಯಲು ಒಪ್ಪುತ್ತಿಲ್ಲ ಎಂದು ಶುಕ್ರವಾರದ ಪ್ರತಿಭಟನೆ ವೇಳೆ ಗೆಹ್ಲೋಟ್ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News