ಬಾಲಿವುಡ್ ನಲ್ಲಿ ನನ್ನ ವಿರುದ್ಧ ಗುಂಪೊಂದು ಕೆಲಸ ಮಾಡುತ್ತಿದೆ: ಎ.ಆರ್. ರಹ್ಮಾನ್

Update: 2020-07-25 17:24 GMT

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಕಡಿಮೆ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿರುವುದಕ್ಕೆ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್ ಕಾರಣವನ್ನು ತಿಳಿಸಿದ್ದಾರೆ.

ರೇಡಿಯೋ ಮಿರ್ಚಿ ಜೊತೆ ಮಾತನಾಡಿದ ಅವರು, “ನಾನು ಒಳ್ಳೆಯ ಸಿನೆಮಾಗಳ ಅವಕಾಶ ನಿರಾಕರಿಸುವುದಿಲ್ಲ. ಆದರೆ ಇಲ್ಲಿರುವ ಗುಂಪೊಂದು ತಪ್ಪು ಗ್ರಹಿಕೆಗಳ ಕಾರಣದಿಂದ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದೆ. ಮುಕೇಶ್ ಛಾಬ್ರಾ ನನಗೆ ಕರೆ ಮಾಡಿದಾಗ ನಾನು ಅವರಿಗೆ 2 ದಿನಗಳಲ್ಲಿ ನಾಲ್ಕು ಹಾಡುಗಳನ್ನು ನೀಡಿದೆ. ಈ ಸಂದರ್ಭ ಅವರು, ‘ಸರ್ ಹಲವರು ನಿಮ್ಮ ಬಳಿ ಬರದಂತೆ ಹೇಳಿದರು’ ಎಂದರು. ಒಂದು ಗುಂಪು ನನ್ನ ವಿರುದ್ಧ ಇಲ್ಲಿ ಕೆಲಸ ಮಾಡುತ್ತಿದೆ. ಅದೂ ಅವರು ತಪ್ಪು ಮಾಡುತ್ತಿದ್ದಾರೆ ಎನ್ನುವ ಅರಿವು ಅವರಿಗಿಲ್ಲದೆ ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ” ಎಂದು ರಹ್ಮಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News