‘ಸರಕಾರಕ್ಕೆ ಪಬ್ ಜಿ ನಿಷೇಧಿಸುವ ಮನಸ್ಸಿದೆ, ಆದರೆ ಯುವಜನರು ಉದ್ಯೋಗ ಕೇಳುತ್ತಾರೆ ಎನ್ನುವ ಭಯವಿದೆ’

Update: 2020-07-28 08:05 GMT

ಹೊಸದಿಲ್ಲಿ: 47 ಚೀನೀ ಆ್ಯಪ್‍ ಗಳನ್ನು ನಿಷೇಧಿಸಿ ಭಾರತ ಸರಕಾರ ಕ್ರಮ ಕೈಗೊಂಡಿರುವ ಬೆನ್ನಿಗೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ, ಮೋದಿ ಸರಕಾರಕ್ಕೆ ಜನಪ್ರಿಯ ಆನ್ ಲೈನ್ ವೀಡಿಯೋ ಗೇಮ್ ಪಬ್‍ ಜಿ ಯನ್ನು ನಿಷೇಧಿಸುವ ಮನಸ್ಸಿತ್ತಾದರೂ ಯುವಜನತೆ ಈ ಗೇಮ್ ಆಡುವುದನ್ನು ನಿಲ್ಲಿಸಿದರೆ ನಿರುದ್ಯೋಗದ ಕುರಿತು ಮಾತನಾಡುತ್ತಾರೆಂದು ತಿಳಿದು ಅಂತಹ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

“ಮೋದೀ ಜಿ ನಿಜವಾಗಿಯೂ ಪಬ್‍ ಜಿ ನಿಷೇಧಿಸುವ ಇಂಗಿತ ಹೊಂದಿದ್ದರು, ಆದರೆ  ಯುವಜನತೆ  ಈ ಕಲ್ಪನಾ ಲೋಕದಲ್ಲಿಯೇ ಮೈಮರೆಯದೇ ಇದ್ದರೆ ಅವರು ಉದ್ಯೋಗದಂತಹ ನಿಜವಾದ ವಸ್ತುಗಳನ್ನು ಕೇಳಿದರೆ ಸಮಸ್ಯೆಯಾಗುವುದು ಎಂದು ಅವರು  ತಿಳಿದಿದ್ದಾರೆ'' ಎಂದು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು 59 ಚೀನೀ ಆ್ಯಪ್‍ ಗಳನ್ನು ನಿಷೇಧಿಸಿದ್ದ ಕೇಂದ್ರ ಸರಕಾರ ಸೋಮವಾರ 47 ಇತರ ಚೀನೀ ಆ್ಯಪ್‍ಗಳನ್ನು ನಿಷೇಧಿಸಿದೆ. ಇವುಗಳಲ್ಲಿ ಹೆಚ್ಚಿನವು ಈ ಹಿಂದೆ ನಿಷೇಧಿತ ಆ್ಯಪ್‍ಗಳ ಕಂಪೆನಿಯ ಕ್ಲೋನ್ ಆ್ಯಪ್‍ ಗಳಾಗಿವೆ. ಈ ಬಾರಿ ನಿಷೇಧಿತ ಆ್ಯಪ್‍ ಗಳಲ್ಲಿ ಟಿಕ್‍ ಟಾಕ್ ಲೈಟ್, ಹೇಲೋ ಲೈಟ್, ಶೇರ್‍ಇಟ್ ಲೈಟ್, ಬಿಗೊ ಲೈವ್ ಲೈಟ್ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News