2019-20: ಆಸ್ಟ್ರೇಲಿಯ ಪೌರತ್ವದಲ್ಲಿ ಭಾರತೀಯರು ಮುಂದು

Update: 2020-07-29 15:40 GMT

ಮೆಲ್ಬರ್ನ್, ಜು. 29: 2019-20ರಲ್ಲಿ 38,000ಕ್ಕೂ ಅಧಿಕ ಭಾರತೀಯರು ಆಸ್ಟ್ರೇಲಿಯ ಪೌರತ್ವ ಪಡೆದಿದ್ದಾರೆ ಹಾಗೂ ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 60 ಶೇಕಡ ಹೆಚ್ಚಳವಾಗಿದೆ ಮತ್ತು ದೇಶದ ಪೌರತ್ವ ಪಡೆದ ಅತಿ ದೊಡ್ಡ ಅಂತರ್‌ರಾಷ್ಟ್ರೀಯ ಸಮುದಾಯವಾಗಿದೆ.

2019-20ರಲ್ಲಿ ಎರಡು ಲಕ್ಷಕ್ಕೂ ಅಧಿಕ ವಿದೇಶೀಯರು ಆಸ್ಟ್ರೇಲಿಯದ ಪೌರತ್ವ ಪಡೆದಿದ್ದಾರೆ. ಈ ಪೈಕಿ 38,209 ಮಂದಿ ಭಾರತೀಯರು. ಇದು ವರ್ಷವೊಂದರಲ್ಲಿ ಆಸ್ಟ್ರೇಲಿಯದ ಪೌರತ್ವ ಪಡೆದ ಅತಿ ದೊಡ್ಡ ವಿದೇಶಿ ಸಮುದಾಯವಾಗಿದೆ. ನಂತರದ ಸ್ಥಾನದಲ್ಲಿ ಬ್ರಿಟಿಶರಿದ್ದು, 25,011 ಬ್ರಿಟಿಶರಿಗೆ ಪೌರತ್ವ ಲಭಿಸಿದೆ. 14,764 ಚೀನೀಯರು ಮತ್ತು 8,821 ಪಾಕಿಸ್ತಾನೀಯರೂ ಆಸ್ಟ್ರೇಲಿಯದ ಪೌರತ್ವ ಪಡೆದಿದ್ದಾರೆ.

ವಿದೇಶೀಯರಿಗೆ ಪೌರತ್ವ ನೀಡುವುದು, ಆಸ್ಟ್ರೇಲಿಯವು ಸಾಮಾಜಿಕ ಐಕ್ಯತೆ ಹೊಂದಿದ ಹಾಗೂ ಬಹುಸಂಸ್ಕತಿಯ ದೇಶವಾಗಿ ಯಶಸ್ವಿಯಾಗಲು ಪ್ರಮುಖ ಕಾರಣವಾಗಿದೆ ಎಂದು ಆಸ್ಟ್ರೇಲಿಯದ ವಲಸೆ, ಪೌರತ್ವ, ವಲಸೆ ಸೇವೆಗಳು ಮತ್ತು ಬಹುಸಂಸ್ಕತಿ ವ್ಯವಹಾರಗಳ ಸಚಿವ ಅಲನ್ ಟಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News