ಕೊರೋನ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಮರಳಲು ಸಾಧ್ಯವಿಲ್ಲ: ನ್ಯಾಯಾಲಯಕ್ಕೆ ನವಾಝ್ ಶರೀಫ್ ಹೇಳಿಕೆ

Update: 2020-07-29 15:59 GMT

ಲಾಹೋರ್ (ಪಾಕಿಸ್ತಾನ), ಜು. 29: ‘ನನಗೆ ಪಾಕಿಸ್ತಾನಕ್ಕೆ ಮರಳಲು ಸಾಧ್ಯವಾಗುವುದಿಲ್ಲ’ ಎಂದು ಈಗ ಚಿಕಿತ್ಸೆಗಾಗಿ ಲಂಡನ್‌ ನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಮಂಗಳವಾರ ಲಾಹೋರ್‌ನ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ.

ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿರುವ 70 ವರ್ಷದ ಶರೀಫ್, ರೋಗನಿರೋಧಕ ವ್ಯವಸ್ಥೆಯಲ್ಲಿನ ವೈಫಲ್ಯಕ್ಕಾಗಿ ಚಿಕಿತ್ಸೆ ಪಡೆಯುವುದಕ್ಕಾಗಿ ಲಂಡನ್‌ನಲ್ಲಿದ್ದಾರೆ.

ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಲು ಕಳೆದ ವರ್ಷದ ನವೆಂಬರ್‌ನಲ್ಲಿ ಲಾಹೋರ್ ಹೈಕೋರ್ಟ್ ನಾಲ್ಕು ವಾರಗಳ ಅನುಮತಿ ನೀಡಿದ ಬಳಿಕ ಶರೀಫ್ ಲಂಡನ್‌ಗೆ ಹೋಗಿದ್ದರು.

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಸೋಂಕಿಗೆ ಒಳಗಾಗುವ ಸಾಧ್ಯತೆಯಿರುವುದರಿಂದ ಹೊರಗೆ ಹೋಗದಂತೆ ವೈದ್ಯರು ನನಗೆ ಸಲಹೆ ನೀಡಿದ್ದಾರೆ ಎಂಬುದಾಗಿ ನವಾಝ್ ಶರೀಫ್ ತನ್ನ ವಕೀಲ ಅಮ್ಜದ್ ಫರ್ವೇಝ್ ಮೂಲಕ ಲಾಹೋರ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಇತ್ತೀಚಿನ ವೈದ್ಯಕೀಯ ವರದಿಯನ್ನು ಅವರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News