‘ನನ್ನನ್ನು ದೇಶ ವಿರೋಧಿ ಎಂದು ಕರೆಯಲು ನಿಮಗೆಷ್ಟು ಧೈರ್ಯ’: ನಟ ಇರ್ಫಾನ್ ಖಾನ್ ಪುತ್ರ ಬಾಬಿಲ್

Update: 2020-07-30 09:19 GMT

ಹೊಸದಿಲ್ಲಿ: ತನ್ನ ಧರ್ಮದ ಕಾರಣಕ್ಕಾಗಿ ಕೆಲವರು ತಾರತಮ್ಯ ನಡೆಸುತ್ತಿದ್ದಾರೆ ಎಂದು ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ಪುತ್ರ ಬಾಬಿಲ್ ಖಾನ್ ಹೇಳಿದ್ದಾರೆ.

“ಅಧಿಕಾರದಲ್ಲಿರುವ ಜನರ ಬಗ್ಗೆ ನನಗೇನು ಅನಿಸುತ್ತಿದೆ ಎನ್ನುವುದನ್ನು ಪೋಸ್ಟ್ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಅದು ನನ್ನ ವೃತ್ತಿ ಜೀವನವನ್ನು ಕೊನೆಗೊಳಿಸಬಹುದು ಎಂದು ನನ್ನ ತಂಡ ಹೇಳುತ್ತಿದೆ. ನಾನು ಹೆದರಿದ್ದೇನೆ. ನನ್ನ ಧರ್ಮದ ಆಧಾರದಲ್ಲಿ ನಿರ್ಧರಿಸುವುದು ನನಗಿಷ್ಟವಿಲ್ಲ. ನಾನು ನನ್ನ ಧರ್ಮವಲ್ಲ, ನಾನು ಒಬ್ಬ ಮನುಷ್ಯ” ಎಂದವರು ಹೇಳಿದ್ದಾರೆ.

ಇದೇ ಸಂದರ್ಭ ಅವರು ಈದ್ ಗೆ ನೀಡಲಾಗುತ್ತಿದ್ದ ಕಡ್ಡಾಯ ರಜೆಯನ್ನು ರದ್ದುಗೊಳಿಸಿದ ಬಗ್ಗೆಯೂ ಮಾತನಾಡಿದ್ದು, ರಕ್ಷಾಬಂಧನದ ದಿನ ರಜೆ ನೀಡಲಾಗುತ್ತಿದೆ ಎಂದಿದ್ದಾರೆ.

“ನಮ್ಮ ಸುಂದರ ಜಾತ್ಯಾತೀತ ಭಾರತದ ದಿಢೀರ್ ಧಾರ್ಮಿಕ ಒಡಕು ನಿಜವಾಗಿಯೂ ಭಯ ಹುಟ್ಟಿಸುತ್ತಿದೆ. ನಾನು ನಿರ್ದಿಷ್ಟ ಧರ್ಮವೊಂದಕ್ಕೆ ಸೇರಿದವನು ಎಂಬ ಕಾರಣಕ್ಕೆ ನನ್ನ ಕೆಲವು ಗೆಳೆಯರು ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ನಾನು ನನ್ನ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಮತ್ತು ಮಾನವ ಗೆಳೆಯರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಭಾರತವನ್ನು ಪ್ರೀತಿಸುತ್ತೇನೆ. ನಾನು ದೇಶ ವಿರೋಧಿ ಎಂದು ಕರೆಯಲು ನಿಮಗೆಷ್ಟು ಧೈರ್ಯ, ನಾನು ಹೇಳುತ್ತಿದ್ದೇನೆ. ನಾನೊಬ್ಬ ಬಾಕ್ಸರ್ , ನಾನು ನಿಮ್ಮ ಮೂಗು ಮುರಿಯುತ್ತೇನೆ” ಎಂದು ಬಾಬಿಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News