ಬ್ರಿಟನ್‌ನಿಂದ ಭಾರತಕ್ಕೆ ಮರಳಲಿರುವ ರಾಜಸ್ಥಾನದ ಶಿವ ವಿಗ್ರಹ

Update: 2020-07-30 17:03 GMT

ಲಂಡನ್, ಜು. 30: ರಾಜಸ್ಥಾನದ ದೇವಾಲಯವೊಂದರಿಂದ ಕದ್ದು ಬ್ರಿಟನ್‌ಗೆ ಸಾಗಿಸಲಾಗಿದ್ದ ಪ್ರಾಚೀನ ಅಮೂಲ್ಯ ಶಿವನ ವಿಗ್ರಹವೊಂದು ಭಾರತಕ್ಕೆ ಮರಳಲಿದೆ.

9ನೇ ಶತಮಾನದ ರಾಜಸ್ಥಾನದ ‘ಪ್ರತಿಹಾರ’ ಶೈಲಿಯಲ್ಲಿ ನಿರ್ಮಿಸಲಾಗಿರುವ 4 ಅಡಿ ಎತ್ತರದ ವಿಗ್ರಹವನ್ನು ರಾಜಸ್ಥಾನದ ಬರೋಲಿ ಎಂಬಲ್ಲಿರುವ ಗಾತೇಶ್ವರ ದೇವಸ್ಥಾನದಿಂದ 1998ರಲ್ಲಿ ಕದಿಯಲಾಗಿತ್ತು.

ವಿಗ್ರಹವು ಬ್ರಿಟನ್‌ನ ಶ್ರೀಮಂತ ವ್ಯಕ್ತಿಯೊಬ್ಬರ ಬಳಿ ಇರುವುದು ಬಳಿಕ ಗೊತ್ತಾಗಿತ್ತು. ಬ್ರಿಟಿಶ್ ಮತ್ತು ಭಾರತೀಯ ಅಧಿಕಾರಿಗಳ ಜಂಟಿ ಪ್ರಯತ್ನಗಳ ಫಲವಾಗಿ, ಬ್ರಿಟಿಶ್ ವ್ಯಕ್ತಿಯು ಸ್ವಯಂಪ್ರೇರಿತವಾಗಿ 2005ರಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್‌ಗೆ ಒಪ್ಪಿಸಿದ್ದರು ಎನ್ನಲಾಗಿದೆ. ಅಂದಿನಿಂದ ವಿಗ್ರಹವು ಲಂಡನ್‌ನ ಕೇಂದ್ರ ಭಾಗದಲ್ಲಿರುವ ಇಂಡಿಯ ಹೌಸ್‌ನಲ್ಲಿತ್ತು.

ಈಗ ಅದು ರಾಜಸ್ತಾನದ ಮೂಲ ದೇವಸ್ಥಾನಕ್ಕೆ ಮರಳಲು ಸಜ್ಜಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News