ಕೊರೋನ ವಾರಿಯರ್ಸ್‌ಗೆ ಸರಿಯಾದ ಸಮಯಕ್ಕೆ ಸಂಬಳ ಪಾವತಿಸಿ: ಸುಪ್ರೀಂಕೋರ್ಟ್

Update: 2020-07-31 06:52 GMT

ಹೊಸದಿಲ್ಲಿ, ಜು.31: ಕೋವಿಡ್-19 ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿರುವ ವೈದ್ಯರುಗಳು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ಸಮಯಕ್ಕೆ ಸಂಬಳ ವಿಲೇವಾರಿಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಇಂದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.

 ಕೊರೋನ ವಾರಿಯರ್ಸ್‌ಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲಾಗುತ್ತಿಲ್ಲ ಎಂಬ ದೂರುಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಈ ಕುರಿತು ಮಾಹಿತಿ ಕಲೆ ಹಾಕಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಆದೇಶಿಸಿತ್ತು.

ಇಂದು ಸುಪ್ರೀಂಕೋರ್ಟ್‌ಗೆ ಉತ್ತರ ನೀಡಿದ ಕೇಂದ್ರ ಸರಕಾರ, ನಾವು ನಿರ್ದೇಶನ ನೀಡಿದ ಹೊರತಾಗಿಯೂ ನಾಲ್ಕು ರಾಜ್ಯಗಳು ಈ ತನಕ ಕೊರೋನ ವಾರಿಯರ್ಸ್‌ಗೆ ಸರಿಯಾಗಿ ಸಂಬಳ ನೀಡಿಲ್ಲ ಎಂದು ಮಾಹಿತಿ ನೀಡಿದೆ.

ಕೊರೋನ ವಾರಿಯರ್ಸ್‌ಗೆ ಸಂಬಳ ನೀಡದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ ತ್ರಿಪುರಾ ಹಾಗೂ ಪಂಜಾಬ್ ರಾಜ್ಯಗಳಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News