ಬಿಎಸ್4 ವಾಹನ ನೋಂದಣಿ ತಡೆ ಅವಧಿಯನ್ನು ವಿಸ್ತರಿಸಿದ ಸುಪ್ರೀಂಕೋರ್ಟ್

Update: 2020-07-31 08:17 GMT

ಹೊಸದಿಲ್ಲಿ, ಜು.31: ದೇಶದಲ್ಲಿ ಬಿಎಸ್4 ವಾಹನಗಳ ನೋಂದಣಿ ತಡೆಯುವ ಆದೇಶವನ್ನು ವಿಸ್ತರಿಸುತ್ತಿರುವುದಾಗಿ ಸುಪ್ರೀಂಕೋರ್ಟ್ ಇಂದು ವಿಚಾರಣೆಯಲ್ಲಿ ತಿಳಿಸಿದೆ.

ಲಾಕ್‌ಡೌನ್ ಅವಧಿಯ ನಂತರ ಬಿಎಸ್4 ವಾಹನಗಳನ್ನು ನೋಂದಾಯಿಸಲು 10 ದಿನಗಳ ಸಮಯವನ್ನು ನೀಡುವಂತೆ ವಾಹನ ವಿತರಕರಿಗೆ ನೀಡಿದ ಆದೇಶವನ್ನು ಜುಲೈ 8,2020ರಂದು ಸುಪ್ರೀಂಕೋರ್ಟ್ ಹಿಂತೆಗೆದುಕೊಂಡಿತು. ಈಗ ಅದನ್ನು ಮುಂದಿನ ಅಧಿಸೂಚನೆಯ ತನಕ ವಿಸ್ತರಿಸಲಾಗಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 13,2020ಕ್ಕೆ ನಿಗದಿಪಡಿಸಲಾಗಿದೆ.

ಸುಪ್ರೀಂಕೋರ್ಟ್ ಹೊರಡಿಸಿದ ಮಾರ್ಚ್ ಆದೇಶಕ್ಕೆ ಬದ್ಧವಾಗಿಲ್ಲ ಎಂದು ಆಟೋ ಮೊಬೈಲ್ ಅಸೋಸಿಯೇಶನ್‌ಗಳನ್ನು ನ್ಯಾಯಾಲಯ ಈ ವರ್ಷದ ಜೂನ್‌ನಲ್ಲಿ ತರಾಟೆಗೆ ತೆಗೆದುಕೊಂಡಿತ್ತು. 1.05 ಲಕ್ಷ ಬಿಎಸ್4 ವಾಹನಗಳ ಮಾರಾಟ ಹಾಗೂ ನೋಂದಣಿಗೆ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಈಗ ಆ ಸಂಖ್ಯೆಯನ್ನು ಮೀರಿದೆ. 2.55 ಲಕ್ಷಕ್ಕೂ ಅಧಿಕ ಬಿಎಸ್4 ವಾಹನಗಳನ್ನು ಮಾರಾಟ ಮಾಡಲಾಗಿದೆ. ಅದು ಆದೇಶಿಸಿದ್ದಕ್ಕಿಂತ ಹೆಚ್ಚಿನದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದಾಗ್ಯೂ ಆಟೋ ಮೊಬೈಲ್ ಸಂಘಗಳು ಒದಗಿಸಿದ ಅಂಕಿ-ಅಂಶವನ್ನು ನ್ಯಾಯಾಲಯ ಪರಿಶೀಲನೆ ನಡೆಸಲಿದೆ. ಆ ನಂತರ ಆದೇಶ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News