ಜಮ್ಮು-ಕಾಶ್ಮೀರ: ಗೃಹ ಬಂಧನದಿಂದ ಸಜಾದ್ ಲೋನ್ ಬಿಡುಗಡೆ

Update: 2020-07-31 10:16 GMT

ಹೊಸದಿಲ್ಲಿ, ಜು.31: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಪಡಿಸಿದಾಗ ಸುಮಾರುಒಂದು ವರ್ಷದ ಹಿಂದೆ 2019ರ ಆಗಸ್ಟ್‌ನಲ್ಲಿ ಬಂಧಿಸಲ್ಪಟ್ಟಿರುವ ಪೀಪಲ್ಸ್ ಕಾನ್ಫರೆನ್ಸ್‌ನ ಚೇರ್ಮನ್ ಹಾಗೂ ಮಾಜಿ ರಾಜ್ಯ ಸಚಿವ ಸಜಾದ್ ಲೋನ್ ಶುಕ್ರವಾರ ಗೃಹ ಬಂಧನದಿಂದ ಬಿಡುಗಡೆಯಾಗಿದ್ದಾರೆ.

ಟ್ವಿಟರ್‌ನ ಮೂಲಕ ತಾನು ಗೃಹ ಬಂಧನದಿಂದ ಬಿಡುಗಡೆಯಾಗುತ್ತಿರುವ ಸುದ್ದಿಯನ್ನು ಲೋನ್ ಬಹಿರಂಗಪಡಿಸಿದರು.

ಜೈಲು ನನಗೆ ಹೊಸತೇನಲ್ಲ. ಆದರೆ, ಈ ಬಾರಿ ಮಾನಸಿಕವಾಗಿ ನಾನು ಬಳಲುವಂತಾಗಿತ್ತು . ಒಂದು ವರ್ಷಕ್ಕೆ ಐದು ದಿನ ಬಾಕಿ ಇರುವಾಗ ನಾನು ಸ್ವತಂತ್ರ ವ್ಯಕ್ತಿ ಎಂದು ಅಧಿಕೃತವಾಗಿ ಮಾಹಿತಿ ನೀಡಲಾಗಿದೆ. ಸಾಕಷ್ಟು ಬದಲಾಗಿದೆ. ಆದಷ್ಟು ಬೇಗನೆ ನಿಮ್ಮಿಂದಿಗೆ ಎಲ್ಲವನ್ನು ಹಂಚಿಕೊಳ್ಳುವ ವಿಶ್ವಾಸದಲ್ಲಿದ್ದೇನೆ ಎಂದು ಲೋನ್ ಟ್ವೀಟ್ ಮಾಡಿದ್ದಾರೆ.

 ಲೋನ್ ಆಗಸ್ಟ್ 5,2019ರ ಬಳಿಕ ಮೊದಲ ಬಾರಿ ಟ್ವೀಟ್ ಮಾಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಲೋನ್ ಅವರ ಜೊತೆಗೆ ಪಿಡಿಪಿಯ ಯೂತ್ ವಿಂಗ್ ಅಧ್ಯಕ್ಷ ವಹೀದ್ ಪಾರ್ರಾರನ್ನು ಶಾಸಕರ ಹಾಸ್ಟೆಲ್‌ನಿಂದ ಮನೆಗಳಿಗೆ ಸ್ಥಳಾಂತರಿಸಲಾಗಿತ್ತು. ಇಬ್ಬರನ್ನು ಗೃಹ ಬಂಧನದಲ್ಲಿಡಲಾಗಿತ್ತು.

ಕೇಂದ್ರ ಸರಕಾರ ವಿಧಿ 370 ಹಾಗೂ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಲೋನ್ ಸಹಿತ ಕಾಶ್ಮೀರದ ಹಲವು ರಾಜಕಾರಣಿಗಳು, ವಕೀಲರುಗಳು, ಉದ್ಯಮಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News