ಕೋವಿಡ್ ಕರ್ತವ್ಯದಲ್ಲಿದ್ದ ಅವಳಿ ಕಾನ್‍ಸ್ಟೇಬಲ್‍ಗಳು ಅದೇ ಸೋಂಕಿಗೆ ಬಲಿ

Update: 2020-07-31 10:48 GMT

ಮುಂಬೈ, ಜು.31 : ಕೋವಿಡ್ ಸಮಸ್ಯೆ ಆರಂಭಗೊಂಡಂದಿನಿಂದ ಕೋವಿಡ್ ಕರ್ತವ್ಯದಲ್ಲಿದ್ದ ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಅವಳಿ ಸೋದರರಾದ ಕಾನ್‍ಸ್ಟೇಬಲ್‍ಗಳಿಬ್ಬರು ಕೇವಲ ಹತ್ತು ದಿನಗಳ ಅಂತರದಲ್ಲಿ ಅದೇ ಸೋಂಕಿಗೆ ಬಲಿಯಾಗಿದ್ದಾರೆ.

ಇಬ್ಬರೂ ಮಹಾರಾಷ್ಟ್ರ ಪೊಲೀಸ್ ಸೇವೆಗೆ 1991ರಲ್ಲಿ ಸೇರಿದ್ದರು.  ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ 56 ವರ್ಷದ ದಿಲೀಪ್ ಘೊಡ್ಕೆ ಜುಲೈ 20ರಂದು ಮೃತಪಟ್ಟಿದ್ದರೆ, ಅವರ ಅವಳಿ ಸೋದರ, ಅಂಬರನಾಥ್ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಆಗಿದ್ದ ಜಯಸಿಂಗ್ ಘೊಡ್ಕೆ ಗುರುವಾರ ಡೊಂಬಿವಿಲಿಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News