ಮೆಹಬೂಬಾ ಮುಫ್ತಿ ಬಂಧನ ಅವಧಿ ಇನ್ನೂ ಮೂರು ತಿಂಗಳು ವಿಸ್ತರಿಸಿದ ಜಮ್ಮು ಕಾಶ್ಮೀರ ಆಡಳಿತ

Update: 2020-07-31 12:09 GMT

 ಹೊಸದಿಲ್ಲಿ, ಜು.31: ಪಿಡಿಪಿ ನಾಯಕಿ ಹಾಗೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಬಂಧನ ಅವಧಿಯನ್ನು ಇಂದು ಅಲ್ಲಿನ ಆಡಳಿತ ಇನ್ನೂ ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ. ಮೆಹಬೂಬಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿಯಲ್ಲಿ ಬಂಧಿಸಲಾಗಿದೆ.

ಮೆಹಬೂಬಾ ಅವರು ಈಗಾಗಲೇ ಸುಮಾರು ಒಂದು ವರ್ಷ ಅವಧಿ ಬಂಧನದಲ್ಲಿ ಕಳೆದಿದ್ದಾರೆ. ಆರಂಭದಲ್ಲಿ  ಅವರನ್ನು ಸರಕಾರಿ ಅತಿಥಿಗೃಹದಲ್ಲಿ ದಿಗ್ಬಂಧನಲ್ಲಿರಿಸಲಾಗಿದ್ದರೆ ನಂತರ ಅವರ ನಿವಾಸದಲ್ಲಿಯೇ ಅವರನ್ನು ಇರಿಸಲಾಗಿತ್ತು. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಅಂತ್ಯಗೊಳಿಸಿ 370ನೇ ವಿಧಿಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಮೆಹಬೂಬಾ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಮೆಹಬೂಬಾ ವಿರುದ್ಧ  ಫೆಬ್ರವರಿಯಲ್ಲಿ ಸಾರ್ವಜನಿಕ ಸುರಕ್ಷತಾ ಕಾಯಿದೆಯನ್ನು ಹೇರಲಾಗಿತ್ತು, ಇದೇ ಕಾಯಿದೆಯಡಿ ಬಂಧನದಲ್ಲಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕರೂ ಮಾಜಿ ಸಿಎಂಗಳೂ ಆದ ಫಾರೂಖ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ಅವರನ್ನು ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಸಜಾದ್ ಲೋನ್ ಅವರನ್ನು ಇಂದು ಒಂದು ವರ್ಷ ಅವಧಿಯ ನಂತರ ಗೃಹ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News