ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ: ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ

Update: 2020-07-31 12:44 GMT

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಂದೆ ಸಲ್ಲಿಸಿದ ದೂರಿನನ್ವಯ ಬಿಹಾರ ಪೊಲೀಸರು ದಾಖಲಿಸಿರುವ ಎಫ್‍ಐಆರ್ ಅನ್ನು ಆಧಾರವಾಗಿಟ್ಟುಕೊಂಡು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ.

ಸುಶಾಂತ್ ಬ್ಯಾಂಕ್ ಖಾತೆಯಿಂದ ಕಾರಣ ತಿಳಿಯದ ಹಣ ವರ್ಗಾವಣೆಗಳು ನಡೆದಿವೆ ಹಾಗೂ ಇದರ ಹಿಂದೆ ಆತನ ಗೆಳತಿ ರಿಯಾ ಚಕ್ರವರ್ತಿ ಮತ್ತಿತರರು ಇದ್ದಾರೆಂದು ಸುಶಾಂತ್ ತಂದೆ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

ತಾನು ವೃತ್ತಿಯಲ್ಲಿ ಮುಂದೆ ಬರುವ ಉದ್ದೇಶದಿಂದಲೇ ರಿಯಾ ಚಕ್ರವರ್ತಿ ಮೇ 2019ರಲ್ಲಿ ತನ್ನ ಪುತ್ರನ ಸ್ನೇಹ ಸಂಪಾದಿಸಿದ್ದರು ಎಂದೂ ಸುಶಾಂತ್ ತಂದೆ ಆರೋಪಿಸಿದ್ದಾರೆ. ಅಕ್ರಮ ಆಸ್ತಿ ಗಳಿಸಲು ಸುಶಾಂತ್ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆಯೇ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಮತ್ತಿತರರ ಹೆಸರುಗಳಿದ್ದು ಅವರನ್ನು ಜಾರಿ ನಿರ್ದೇಶನಾಲಯ ಮುಂದಿನ ವಾರ  ವಿಚಾರಣೆಗೆ ಬರ ಹೇಳುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News