ಬಕ್ರೀದ್ ಶುಭಾಶಯ ಕೋರಿದ ರಾಷ್ಟ್ರಪತಿ,ಪ್ರಧಾನಮಂತ್ರಿ
Update: 2020-08-01 12:08 IST
ಹೊಸದಿಲ್ಲಿ, ಆಗಸ್ಟ್ 1: ಕೊರೋನ್ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಶನಿವಾರ ಸರಳವಾಗಿ ಆಚರಿಸುತ್ತಿರುವ ಬಕ್ರೀದ್‍ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
"ಈದುಲ್ ಅಝ್‍ಹಾ ಶುಭಾಶಯಗಳು. ಸೌಹಾರ್ದ ಹಾಗೂ ಅಂತರ್ಗತ ಸಮಾಜವನ್ನು ನಿರ್ಮಿಸಲು ಈ ದಿನ ನಮಗೆ ಪ್ರೇರಣೆ ನೀಡಲಿ. ಈ ಉತ್ಸಾಹ ಹಾಗೂ ಸಹೋದರತೆ ಮತ್ತು ಒಗ್ಗೂಡಿಸುವಿಕೆಯನ್ನು ಹೆಚ್ಚಿಸೋಣ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಬಕ್ರೀದ್ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡಾ ಪ್ರತಿಯೊಬ್ಬರಿಗೂ ಶುಭಾಶಯ ಕೋರಿದ್ದಾರೆ. ಎಲ್ಲರೂ ದೈಹಿಕ ಅಂತರವನ್ನು ಕಾಪಾಡುವಂತೆ ಸಲಹೆ ನೀಡಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈದ್‍ಗೆ ಶುಭಾಶಯ ಕೋರಿದ್ದಾರೆ.