ಬ್ಯಾಂಕ್‍ಗಳಿಗೆ 80 ಕೋಟಿ ರೂ. ವಂಚನೆ :ನೊಯ್ಡಾ ಮೂಲದ ಬಿಲ್ಡರ್ ವಿರುದ್ಧ ಸಿಬಿಐ ಪ್ರಕರಣ

Update: 2020-08-01 08:41 GMT

ಹೊಸದಿಲ್ಲಿ, ಆಗಸ್ಟ್ 1: ರಿಯಲ್ ಎಸ್ಟೇಟ್ ಸಮೂಹ ಗೌರ್‍ಸನ್ಸ್ ಮುಖ್ಯಸ್ಥ ಬಿ.ಎಲ್.ಗೌರ್ ಹಾಗೂ ಆಕೆಯ ಪತ್ನಿ ನವನೀತ್  ಅವರ ಪುತ್ರ ರಾಹುಲ್ ಗೌರ್ ವಿರುದ್ಧ ಬ್ಯಾಂಕ್ ಆಫ್ ಬರೋಡ ಹಾಗೂ ಸಿಂಡಿಕೇಟ್ ಬ್ಯಾಂಕ್‍ಗೆ 80 ಕೋಟಿ ರೂ.ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಸಿಬಿಐ ಪ್ರಕರಣ ದಾಖಲಿಸಿದೆ.
ನೊಯ್ಡಾದ ಸೆಕ್ಟರ್ 150ರಲ್ಲಿ 291 ಲಕ್ಸುರಿ ಅಪಾರ್ಟ್‍ಮೆಂಟ್‍ಗಳನ್ನೊಳಗೊಂಡ ಹೈ ಎಂಡ್ ರೆಸಿಡೆನ್ಸಿಯಲ್ ಕಾಂಪ್ಲೆಕ್ಸ್ ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಕಂಪೆನಿಯು ಒಟ್ಟು 250 ಕೋಟಿ ರೂ. ಸಾಲ (ಬ್ಯಾಂಕ್ ಆಫ್ ಬರೋಡದಿಂದ 150 ಕೋಟಿ ರೂ. ಹಾಗೂ ಸಿಂಡಿಕೇಟ್ ಬ್ಯಾಂಕ್‍ನಿಂದ 100 ಕೋಟಿ ರೂ.) ಪಡೆಯಲು ಮುಂದಾಗಿತ್ತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಬ್ಯಾಂಕ್‍ಗಳಿಂದ 80 ಕೋಟಿ ರೂ. ವಿತರಿಸಲಾಗಿದೆ. ಆದರೆ ಅಪಾರ್ಟ್‍ಮೆಂಟ್ ನಿರ್ಮಾಣ ಯೋಜನೆಯು ಆರಂಭಿಕ ಹಂತದಲ್ಲಿಯೇ ಸ್ಥಗಿತಗೊಂಡಿತ್ತು ಎಂದು ಬ್ಯಾಂಕ್ ಆಫ್ ಬರೋಡ ದೂರಿನಲ್ಲಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News