ಮಹಾತ್ಮಗಾಂಧಿ ಚಿತ್ರವಿರುವ ನಾಣ್ಯ ಹೊರತರಲು ಬ್ರಿಟನ್ ಚಿಂತನೆ

Update: 2020-08-02 15:15 GMT

ಲಂಡನ್: ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನೇತಾರ ಮಹಾತ್ಮಗಾಂಧೀಜಿಯವರ ಚಿತ್ರವಿರುವ ನಾಣ್ಯವನ್ನು ಠಂಕಿಸುವ ಬಗ್ಗೆ ಬ್ರಿಟನ್ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕಪ್ಪುವರ್ಣದವರು ಏಷ್ಯನ್ನರು ಹಾಗೂ ಅಲ್ಪಸಂಖ್ಯಾತ ಬುಡಕಟ್ಟು ಸಮುದಾಯದ ಜನರ ಉನ್ನತಿಗಾಗಿ ಅವರು ನೀಡಿದ ಕೊಡುಗೆಯನ್ನು ಗುರುತಿಸುವ ನಿಟ್ಟಿನಲ್ಲಿ ಆಸಕ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಬ್ರಿಟನ್ ಹಣಕಾಸು ಸಚಿವ ರಿಷಿ ಸುನಾಕ್ ಅವರು ರಾಯಲ್ ಮಿಂಟ್ ಅಡ್ವೈಸರಿ ಕಮಿಟಿಗೆ ಈ ಬಗ್ಗೆ ಪತ್ರ ಬರೆದು, ಈ ಸಮುದಾಯಗಳ ವ್ಯಕ್ತಿಗಳನ್ನು ಗುರುತಿಸುವಂತೆ ಸೂಚಿಸಿದ್ದಾರೆ ಎಂದು ಬ್ರಿಟನ್ ಖಜಾನೆ  ಪ್ರಕಟಿಸಿದೆ.

ಗಾಂಧೀಜಿಯವರ ಭಾವಚಿತ್ರದ ನಾಣ್ಯ ಹೊರತರುವ ಪ್ರಸ್ತಾವವನ್ನು ಆರ್ಎಂಎಸಿ ಪರಿಶೀಲಿಸುತ್ತಿದೆ ಎಂದು ಖಜಾನೆ ಇಲಾಖೆ ಹೇಳಿದೆ.

ಗಾಂಧೀಜಿಯವರು ಅಹಿಂಸೆಯನ್ನು ಜೀವನದುದ್ದಕ್ಕೂ ಪ್ರತಿಪಾದಿಸಿದ್ದಲ್ಲದೇ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ಪಾತ್ರ ನಿರ್ವಹಿಸಿದ್ದರು. ಅವರು ಹುಟ್ಟಿದ ದಿನವಾದ ಅಕ್ಟೋಬರ್ 2ನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News