ಹಿಂದಿ ಮತ್ತು ಸಂಸ್ಕೃತವನ್ನು ಹೇರಲು ನೂತನ ಶಿಕ್ಷಣ ನೀತಿಯ ಪ್ರಯತ್ನ: ಸ್ಟಾಲಿನ್

Update: 2020-08-02 17:31 GMT

ಚೆನ್ನೈ,ಆ.2: ಕೇಂದ್ರದ ನೂತನ ಶಿಕ್ಷಣ ನೀತಿಯು ಇಡೀ ದೇಶದ ಮೇಲೆ ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಹೇರುವ ಪ್ರಯತ್ನವಾಗಿದೆ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಪ್ರತಿಪಾದಿಸಿದ್ದಾರೆ. ನೂತನ ಶಿಕ್ಷಣ ನೀತಿಯು ಹಳೆಯ ದಮನಕಾರಿ ಮನುಸ್ಮತಿಯ ಹೊಸ ರೂಪವಾಗಿದೆ ಎಂದಿದ್ದಾರೆ.

ಶನಿವಾರ ಪಕ್ಷದ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ,ಸಮಾನ ಮನಸ್ಕ ರಾಜಕೀಯ ಪಕ್ಷಗಳು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೈಗಳನ್ನು ಜೋಡಿಸುವ ಮೂಲಕ ನೂತನ ಬದಲಾವಣೆಗಳ ವಿರುದ್ಧ ಹೋರಾಡುವುದಾಗಿ ತಿಳಿಸಿರುವ ಸ್ಟಾಲಿನ್,ಯಶಸ್ವಿಯಾಗಿರುವ 10+2 ವ್ಯವಸ್ಥೆಯ ಬದಲು 5+3+3+4 ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಮಕ್ಕಳಿಗೆ ವೃತ್ತಿಪರ ಶಿಕ್ಷಣದ ಪ್ರಸ್ತಾವವನ್ನು ಅವರ ಮೇಲಿನ ‘ಮಾನಸಿಕ ದಾಳಿ’ಎಂದು ಅವರು ಬಣ್ಣಿಸಿದ್ದಾರೆ.

ನೂತನ ಶಿಕ್ಷಣ ನೀತಿಯು ಭಾರತೀಯ ಸಂವಿಧಾನದಲ್ಲಿ ಒತ್ತಿ ಹೇಳಲಾಗಿರುವ ಒಕ್ಕೂಟ ಸ್ವರೂಪದ ಮೇಲೆ ದಾಳಿಯಾಗಿದೆ ಎಂದಿರುವ ಅವರು,ಸರಕಾರದ ಇಂತಹ ನೀತಿಗಳನ್ನು ವಿರೋಧಿಸಲು ತನ್ನ ಪಕ್ಷವು ಬದ್ಧವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News