‘ನೋವಿಲ್ಲದ ಸಾವು’...: ಆತ್ಮಹತ್ಯೆಗೂ ಮುನ್ನ ಸುಶಾಂತ್ ಸಿಂಗ್ ಗೂಗಲ್ ನಲ್ಲಿ ಹುಡುಕಿದ್ದು ಈ ಮಾಹಿತಿಗಳನ್ನು…

Update: 2020-08-03 09:01 GMT

ಮುಂಬೈ: ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಬಗ್ಗೆ ತಮಗೆ ನಂಟು ಕಲ್ಪಿಸಲಾಗುತ್ತಿದೆ ಎಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೂ ಮುನ್ನ  ನೊಂದಿದ್ದರು ಎಂದು  ಸುಶಾಂತ್ ಸಾವು ಪ್ರಕರಣದ ತನಿಖೆ ಕುರಿತಾದ ಮಾಹಿತಿ ನೀಡಿದ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಹೇಳಿದ್ದಾರೆ. ದಿಶಾ ಅವರ ಸಾವು ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದರ ಹೊರತಾಗಿ ಸುಶಾಂತ್ ಆವರು  ತಮ್ಮ ಹೆಸರು ಬರೆದು ಗೂಗಲ್ ಸರ್ಚ್ ಮಾಡಿ ತಮ್ಮ ಕುರಿತಾದ ಲೇಖನಗಳನ್ನು ಹುಡುಕುತ್ತಿದ್ದರು ಹಾಗೂ ನೋವು ರಹಿತ ಸಾವು, ಸಿಝೋಫ್ರೇನಿಯಾ ಮತ್ತು ಬೈಪೋಲಾರ್ ಡಿಸಾರ್ಡರ್ ಕುರಿತಂತೆಯೂ ಅವರು ಗೂಗಲ್ ಸರ್ಚ್ ಮಾಡುತ್ತಿದ್ದರು ಎಂದು ಸಿಂಗ್ ತಿಳಿಸಿದ್ದಾರೆ.

ಸುಶಾಂತ್ ಪ್ರಕರಣದ ತನಿಖೆಗಾಗಿ ಮುಂಬೈಗೆ ಆಗಮಿಸಿರುವ ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಬಲವಂತವಾಗಿ ಕ್ವಾರಂಟೈನಿಗೊಳಪಡಿಸಲಾಗಿದೆ ಎಂಬ ಆರೋಪಗಳ ಕುರಿತು  ಪ್ರತಿಕ್ರಿಸಿದ ಸಿಂಗ್, ಇದರಲ್ಲಿ ನಮ್ಮ ಪಾತ್ರವೇನಿಲ್ಲ, ಈ ಕುರಿತು ಬಿಎಂಸಿ ಕ್ರಮ ಕೈಗೊಂಡಿದೆ ಎಂದರು.

ಸುಶಾಂತ್ ಕುಟುಂಬ ಬಿಹಾರದಲ್ಲಿ ಎಫ್‍ಐಆರ್ ದಾಖಲಿಸಿರುವ ಕುರಿತಂತೆ ಮಾತನಾಡಿದ ಸಿಂಗ್ ಜೂನ್ 16ರಂದು  ಅವರ ಕುಟುಂಬದ ಸದಸ್ಯರು ಸಹಿ ಹಾಕಿ ನೀಡಿದ ಹೇಳಿಕೆಗಳಲ್ಲಿ ತಮಗೆ ಯಾರ ಮೇಲೂ ಶಂಕೆಯಿಲ್ಲ ಎಂದಿದ್ದರು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News