ಅಮೆರಿಕ ಸಚಿವ ಸಂಪುಟ ನಿಯೋಗದ ತೈವಾನ್ ಭೇಟಿಗೆ ಚೀನಾ ವಿರೋಧ

Update: 2020-08-05 15:31 GMT

ಬೀಜಿಂಗ್, ಆ. 5: ಅಮೆರಿಕ ಮತ್ತು ಚೀನಾಗಳ ನಡುವಿನ ಸಂಬಂಧವು ಐತಿಹಾಸಿಕ ಕನಿಷ್ಠ ಮಟ್ಟದಲ್ಲಿರುವ ಸಮಯದಲ್ಲಿ ಅಮೆರಿಕ ಸಚಿವ ಸಂಪುಟದ ಉನ್ನತ ಸದಸ್ಯರೊಬ್ಬರು ತೈವಾನ್‌ಗೆ ಭೇಟಿ ನೀಡುವುದು ಈ ವಲಯದಲ್ಲಿನ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುತ್ತದೆ ಎಂದು ಚೀನಾ ಬುಧವಾರ ಹೇಳಿದೆ.

ಅಮೆರಿಕದ ಆರೋಗ್ಯ ಕಾರ್ಯದರ್ಶಿ ಅಲೆಕ್ಸ್ ಆ್ಯಝರ್ ನೇತೃತ್ವದ ನಿಯೋಗವೊಂದು ಸ್ವಯಂ ಆಡಳಿತದ ದ್ವೀಪ ದೇಶಕ್ಕೆ ಭೇಟಿ ನೀಡಲಿದೆ ಎಂದು ತೈವಾನ್ ರಾಜಧಾನಿ ತೈಪೆಯಲ್ಲಿರುವ ಅಮೆರಿಕದ ಅನಧಿಕೃತ ರಾಯಭಾರ ಕಚೇರಿ ತಿಳಿಸಿದೆ.

ತೈವಾನ್ ಚೀನಾದ ಭಾಗವಾಗಿದೆ ಎಂದು ಚೀನಾ ಘೋಷಿಸಿದೆ ಹಾಗೂ ಅದನ್ನು ಒಂದು ದಿನ ವಶಪಡಿಸಿಕೊಳ್ಳುವುದಾಗಿ ಅದು ಪಣತೊಟ್ಟಿದೆ.

‘‘ಅಮೆರಿಕ ಮತ್ತು ತೈವಾನ್ ನಡುವಿನ ಸರಕಾರಿ ಮಟ್ಟದ ವ್ಯವಹಾರಗಳನ್ನು ಚೀನಾ ದೃಢವಾಗಿ ವಿರೋಧಿಸುತ್ತದೆ’’ ಎಂದು ಚೀನಾದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು.

ಅಮೆರಿಕವು ತೈವಾನ್‌ಗೆ ನೀಡುತ್ತಿದ್ದ ರಾಜತಾಂತ್ರಿಕ ಮಾನ್ಯತೆಯನ್ನು 1979ರಲ್ಲಿ ಚೀನಾಕ್ಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News