ವುಹಾನ್: ಕೊರೋನದಿಂದ ಗುಣಮುಖರಾದ ಶೇ.90 ರೋಗಿಗಳ ಶ್ವಾಸಕೋಶಗಳಿಗೆ ಹಾನಿ

Update: 2020-08-05 16:21 GMT
ಸಾಂದರ್ಭಿಕ ಚಿತ್ರ

ಬೀಜಿಂಗ್,ಆ.5: ಚೀನಾದ ವುಹಾನ್ ನಗರದಲ್ಲಿ ಪ್ರಮುಖ ಆಸ್ಪತ್ರೆಯೊಂದರಲ್ಲಿ ಕೊರೋನ ವೈರಸ್ ಸೋಂಕಿನಿಂದ ಗುಣಮುಖರಾದ ಶೇ.90ರಷ್ಟು ಮಂದಿಯ ಶ್ವಾಸಕೋಶಗಳಿಗೆ ಹಾನಿಯಾಗಿದೆ ಹಾಗೂ ಶೇ.5ರಷ್ಟು ಮಂದಿಗೆ ಮತ್ತೆ ಕೊರೋನ ಪಾಸಿಟವ್ ಬಂದಿದ್ದು, ಅವರನ್ನು ಕ್ವಾರಂಟೈನ್‌ನಲ್ಲಿದ್ದಾರೆಂದು ಎಂದು ಮಾಧ್ಯಮ ವರದಿಯೊಂದು ಬುಧವಾರ ತಿಳಿಸಿದೆ.

ವುಹಾನ್ ವಿವಿಯ ರೊಂಗ್‌ನಾನ್ ಆಸ್ಪತ್ರೆಯ ನಿರ್ದೇಶಕ ಪೆಂಗ್ ಝಿಯೊಂಗ್ ನೇತೃತ್ವದ ತಂಡವು, ಸೋಂಕಿನಿಂದ ಗುಣಮುಖರಾದ ರೋಗಿಗಳ ತಪಾಸಣೆಯ ವೇಳೆ ಈ ಅಂಶ ಬೆಳಕಿಗೆ ಬಂದಿದೆ.

 ಜುಲೈ ತಿಂಗಳಲ್ಲಿ ಮೊದಲ ಹಂತದ ತಪಾಸಣೆಯನ್ನು ಪೂರ್ಣಗೊಳಿಸಲಾಗಿದೆ. ಕೋವಿಡ್-19ನಿಂದ ಗುಣಮುಖರಾದ ಶೇ.90ರಷ್ಟು ರೋಗಿಗಳ ಶ್ವಾಸಕೋಶಗಳ ಕಾರ್ಯನಿರ್ವಹಣೆಯು, ಆರೋಗ್ಯವಂತ ವ್ಯಕ್ತಿಗಳ ಮಟ್ಟಕ್ಕೆ ಸರಿಸಮಾನವಾಗಿಲ್ಲವೆಂದು ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

  ಸೋಂಕಿನಿಂದ ಗುಣಮುಖರಾದ ರೋಗಿಗಳು ಆರು ನಿಮಿಷಗಳಲ್ಲಿ ಕೇವಲ 100 ಮೀಟರ್‌ವರೆಗೆ ನಡೆಯಲು ಸಾಧ್ಯವಾದರೆ, ಸಾಮಾನ್ಯ ಆರೋಗ್ಯವಂತರು ಇದು ಅವಧಿಯಲ್ಲಿ 500ಮೀಟರ್ ನಡೆಯಬಲ್ಲರು ಎಂದು ಪೆಂಗ್ಸ್ ಅವರ ತಂಡ ನಡೆಸಿದ ಆರು ನಿಮಿಷಗಳ ನಡಿಗೆ ಪರೀಕ್ಷೆಯಿಂದ ಪತ್ತೆಯಾಗಿದೆ ಎಂದು ವರದಿ ಹೇಳಿದೆ. ಚೇತರಿಕೆಯಾದ ಕೆಲವು ರೋಗಿಗಳು ಮೂರು ತಿಂಗಳುಗಳ ಆನಂತರವೂ ಆಮ್ಲಜನಕದ ಯಂತ್ರಗಳನ್ನೇ ಅವಲಂಭಿಸಬೇಕಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News