ಸಚಿವ ಬ್ರಿಜೇಶ್ ಪಾಠಕ್‌ಗೆ ಕೊರೋನ ಸೋಂಕು

Update: 2020-08-05 18:39 GMT

ಲಕ್ನೋ, ಆ. 5: ಉತ್ತರಪ್ರದೇಶದ ಸಂಪುಟ ಸಚಿವ ಬ್ರಿಜೇಶ್ ಪಾಠಕ್ ಅವರು ಕೊರೋನ ಸೊಂಕಿಗೆ ಒಳಗಾಗಿರುವುದು ಬುಧವಾರ ದೃಢಪಟ್ಟಿದೆ. ತನಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ತನ್ನೊಂದಿಗೆ ಇತ್ತೀಚೆಗೆ ಸಂಪರ್ಕದಲ್ಲಿರುವವರು ಕೊರೋನ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಬ್ರಜೇಶ್ ಪಾಠಕ್ ಹೇಳಿದ್ದಾರೆ.

''ಕೊರೋನ ಲಕ್ಷಣ ಇರುವ ಕಾರಣಕ್ಕಾಗಿ ವೈದ್ಯರ ಸಲಹೆಯಂತೆ ನಾನು ಪರೀಕ್ಷೆ ಮಾಡಿಸಿಕೊಂಡೆ. ಪರೀಕ್ಷೆಯಿಂದ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಸರಕಾರದ ಮಾರ್ಗಸೂಚಿ ಅನುಸರಿಸಿ, ಸ್ವಯಂಪ್ರೇರಿತವಾಗಿ ಕ್ವಾರಂಟೈನ್‌ಗೆ ಒಳಗಾಗಿ ಹಾಗೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ'' ಎಂದು ಕಾನೂನು ಸಚಿವ ಪಾಠಕ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News