ಕೇರಳದಲ್ಲಿ ರವಿವಾರದ ವರೆಗೆ ಭಾರೀ ಮಳೆ ಸಾಧ್ಯತೆ

Update: 2020-08-06 14:58 GMT

ತಿರುವನಂತಪುರ, ಆ. 6: ಉತ್ತರ ಹಾಗೂ ಕೇಂದ್ರ ಕೇರಳದಲ್ಲಿ ರವಿವಾರದ ವರೆಗೆ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.

ಇಡುಕ್ಕಿ ಹಾಗೂ ವಯನಾಡ್‌ನಲ್ಲಿ ರೆಡ್ ಅಲರ್ಟ್, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕೋಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಿಸಿದೆ. ರವಿವಾರದ ಒಳಗೆ ಇನ್ನೊಂದು ನಿಮ್ಮ ಒತ್ತಡ ಪ್ರದೇಶ ರೂಪುಗೊಳ್ಳುವುದರಿಂದ ಕೇರಳದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ತಳ ಮಟ್ಟದ ವಿಪತ್ತು ಸಿದ್ಧತೆಯನ್ನು ಸಂಯೋಜಿಸುತ್ತಿರುವ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ)ದ ಅಧಿಕಾರಿಗಳು ಹೇಳಿದ್ದಾರೆ.

 ಕೇರಳದ ಬೆಟ್ಟ ಪ್ರದೇಶಗಳಲ್ಲಿ ಬುಧವಾರದಿಂದ ಭಾರೀ ಮಳೆ ಸುರಿಯುತ್ತಿದೆ. ವಯನಾಡ್‌ನ ಮಾನಂದವಾಡಿಯಲ್ಲಿ ಕಳೆದ 24 ಗಂಟೆಯಲ್ಲಿ (ಗುರುವಾರ ಬೆಳಗ್ಗೆ 8.30ರ ವರೆಗೆ) ಅತ್ಯಧಿಕ 18.6 ಸಿ.ಎಂ. ಮಳೆ ಸುರಿದಿದೆ. ಮಲಪ್ಪುರಂನ ನಿಲಂಬೂರುನಲ್ಲಿ 9.56 ಸಿ.ಎಂ. ಹಾಗೂ ಇಡುಕ್ಕಿಯ ಮುನ್ನಾರ್‌ನಲ್ಲಿ 7.62 ಸಿ.ಎಂ. ಮಳೆ ಸುರಿದಿದೆ.

ಎತ್ತರ ಪ್ರದೇಶಗಳಿಗೆ ಪ್ರಯಾಣಿಸದಂತೆ ಹಾಗೂ ಬೆಟ್ಟ ಪ್ರದೇಶಗಳಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆ ವರೆಗೆ ಸಂಚರಿಸದಂತೆ ಕೆಎಸ್‌ಡಿಎಂಎ ಜನರಲ್ಲಿ ಮನವಿ ಮಾಡಿದೆ. ದುರಂತ ಸಂಭವಿಸಬಹುದೆಂದು ಗುರುತಿಸುವ ಪ್ರದೇಶಗಳಿಂದ ಪರಿಹಾರ ಕೇಂದ್ರಗಳಿಗೆ ವರ್ಗಾವಣೆಗೊಳ್ಳುವಂತೆ ಅದು ಜನರಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News