ಕೊರೋನ ಔಷಧಿ ನೆಪದಲ್ಲಿ ಜನರ ಭಯವನ್ನು ದುರ್ಬಳಕೆ ಮಾಡಿದ ಪತಂಜಲಿ: ಮದ್ರಾಸ್ ಹೈಕೋರ್ಟ್

Update: 2020-08-07 05:44 GMT

ಚೆನ್ನೈ: ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಗೆ ದೊಡ್ಡ ಹಿನ್ನಡೆಯುಂಟು ಮಾಡುವ ಬೆಳವಣಿಗೆಯಲ್ಲಿ ಸಂಸ್ಥೆ ಕೋವಿಡ್-19ಗೆ ಪರಿಣಾಮಕಾರಿ ಔಷಧಿ ಎಂದು ಹೊರತಂದಿರುವ 'ಕೊರೊನಿಲ್'ನ ಟ್ರೇಡ್ ಮಾರ್ಕ್ ಕುರಿತಾದ ವ್ಯಾಜ್ಯವೊಂದರಲ್ಲಿ ಪತಂಜಲಿಗೆ ವಿರುದ್ಧವಾದ ಮದ್ರಾಸ್ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ಈ ಟ್ರೇಡ್ ಮಾರ್ಕ್ ಬಳಕೆ ವಿರುದ್ಧ ಈ ಹಿಂದೆ ಪತಂಜಲಿಗೆ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯ ಈ ಟ್ರೇಡ್ ಮಾರ್ಕ್ ಅನ್ನು ಸಂಸ್ಥೆ ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆಯಲ್ಲದೆ "ಕೊರೋನ ಗುಣಪಡಿಸುವ ಔಷಧಿ ಎಂದು ಹೇಳಿಕೊಂಡು ಸೋಂಕಿನ ಕುರಿತು ಜನರ ಮನಸ್ಸಿನಲ್ಲಿರುವ ಭೀತಿಯನ್ನು ಬಳಸಿ ಲಾಭದ ಬೆನ್ನು ಹತ್ತಿದ್ದಕ್ಕಾಗಿ''  ಸಂಸ್ಥೆಗೆ ರೂ. 10 ಲಕ್ಷ ದಂಡ ವಿಧಿಸಿದೆ.

ಟ್ರೇಡ್ ಮಾರ್ಕ್ ನಿಯಮದಂತೆ 'ಕೊರೊನಿಲ್-92 ಬಿ' ಟ್ರೇಡ್ ಮಾರ್ಕ್ ತನ್ನ ಹೆಸರಿಗೆ ನೋಂದಣಿಯಾಗಿದೆ ಹಾಗೂ ಇದು ಕೈಗಾರಿಕಾ ಉದ್ದೇಶಕ್ಕೆ ಬಳಸಲಾಗುವ ಉತ್ಪನ್ನ ಎಂದು ಹೇಳಿಕೊಂಡು ಚೆನ್ನೈ ಮೂಲದ ಅರುದ್ರ ಇಂಜಿನಿಯರಿಂಗ್ ಪ್ರೈ. ಲಿ. ಎಂಬ ಸಂಸ್ಥೆ ಕೋರ್ಟ್ ಮೆಟ್ಟಿಲು ಹತ್ತಿತ್ತು. ಈ ಕುರಿತು ಕಳೆದ ತಿಂಗಳು ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಅರುದ್ರ ಸಂಸ್ಥೆ ಈ ಟ್ರೇಡ್ ಮಾರ್ಕ್ ಅನ್ನು 2027ರ ತನಕ ತನ್ನ ಹೆಸರಿಗೆ ನೋಂದಣಿ ಮಾಡಿಕೊಂಡಿದೆಯೆನ್ನಲಾಗಿದೆ.

ಈ ಕುರಿತ ಮಾಹಿತಿಯನ್ನು ಪತಂಜಲಿ ಸುಲಭವಾಗಿ ಪಡೆಯಬಹುದಾಗಿತ್ತು ಎಂದು ಹೇಳಿದ ನ್ಯಾಯಾಲಯ ಪತಂಜಲಿ ಹಾಗೂ ಔಷಧಿ ಉತ್ಪಾದಿಸಿದ ದಿವ್ಯ ಮಂದಿರ್ ಯೋಗ್ ಸಂಸ್ಥೆಗೆ ದಂಢ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News