'ಹೇಗೆ ಯೋಚಿಸಬೇಕು' ಎಂಬುದರತ್ತ ಹೆಚ್ಚು ಒತ್ತು ನೀಡುವ ಹೊಸ ಶಿಕ್ಷಣ ನೀತಿ: ಪ್ರಧಾನಿ ಮೋದಿ

Update: 2020-08-07 08:25 GMT

ಹೊಸದಿಲ್ಲಿ: ಹಳೆಯ ಶಿಕ್ಷಣ ನೀತಿ "ನಾವು ಏನು ಯೋಚಿಸಬೇಕು'' ಎಂಬುದರತ್ತ ಹೆಚ್ಚು ಒತ್ತು ನೀಡಿದ್ದರೆ ಹೊಸ ಶಿಕ್ಷಣ ನೀತಿಯ "ನಾವು ಹೇಗೆ ಯೋಚಿಸಬೇಕು'' ಎಂಬ ಅಂಶದತ್ತ ಹೆಚ್ಚು ಗಮನ ನೀಡಿದೆ. ಇದು ಅತ್ಯಂತ ಮಹತ್ವದ ವ್ಯತ್ಯಾಸವಾಗಿದೆ,'' ಎಂದು "ಉನ್ನತ ಶಿಕ್ಷಣದಲ್ಲಿ ಪರಿವರ್ತನಾ ಸುಧಾರಣೆಗಳು'' ಎಂಬ ವಿಷಯದ ಮೇಲಿನ ಸಭೆಯ ಉದ್ಘಾಟನಾ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ನೀಡುತ್ತಾ ಮೇಲಿನ ಮಾತುಗಳನ್ನಾಡಿದ್ದಾರೆ.

"ಇಂದು ದೇಶದ ವಿವಿಧ ಭಾಗಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾದ ಅಭಿಪ್ರಾಯಗಳು ಹೊರಮೊಮ್ಮುತ್ತಿವೆ. ಜನರು ತಮ್ಮ  ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಎಲ್ಲೆಡೆ ಸ್ವಾಗತಿಸಲಾಗಿದೆ ಹಾಗೂ ಗಮನಿಸತಕ್ಕ ಒಂದು ಪ್ರಮುಖ ಅಂಶವೆಂದರೆ ಇಲ್ಲಿಯ ತನಕ ಈ ನೀತಿ ಯಾವುದೇ ಒಂದು ವಿಚಾರದ ಕುರಿತು ಪಕ್ಷಪಾತಿಯಾಗಿದೆ ಎಂದು ಯಾರೂ ಹೇಳಿಲ್ಲ, ಇದೇ ಒಂದು ದೊಡ್ಡ ವಿಚಾರ. ಈ ನೀತಿಯನ್ನು ಹೇಗೆ ಜಾರಿಗೊಳಿಸಲಾಗುವುದೆಂಬುದರ ಕುರಿತು ಈಗ ಎಲ್ಲರ ಚಿತ್ತ ನೆಟ್ಟಿದೆ,'' ಎಂದು ಪ್ರಧಾನಿ ಹೇಳಿದರು.

"ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆ ಅಥವಾ ಸ್ಥಾನೀಯ ಭಾಷೆಯಲ್ಲಿ ಕಲಿಸಿದಾಗ ಅವರು ಒಂದು ವಿಷಯವನ್ನು ಹೆಚ್ಚು ಅರ್ಥ ಮಾಡಿಕೊಳ್ಳುತ್ತಾರೆ. ಆದುದರಿಂದ ಐದನೇ ತರಗತಿ ತನಕ ಮಾತೃಭಾಷೆಯಲ್ಲಿ ಶಿಕ್ಷಣ ಬಹಳಷ್ಟು ಸಹಕಾರಿಯಾಗಲಿದೆ. ಒಮ್ಮೆ ಒಂದು ವಿಷಯ ವಿದ್ಯಾರ್ಥಿಗಳಿಗೆ ಮನದಟ್ಟು ಆದರೆ ನಂತರ ಅವರ ಭವಿಷ್ಯ ಭದ್ರವಾಗುತ್ತದೆ,'' ಎಂದು ಪ್ರಧಾನಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News