ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಬೃಹತ್ ಪ್ರತಿಭಟನೆ: ‘ನಿಮ್ಮ ಸಮಯ ಮುಗಿಯಿತು’ ಎಂದ ಪ್ರತಿಭಟನಕಾರರು

Update: 2020-08-09 14:53 GMT

ಜೆರುಸಲೇಮ್, ಆ. 9: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಾಮೀಲಾಗಿರುವರೆನ್ನಲಾದ ಭ್ರಷ್ಟಾಚಾರ ಪ್ರಕರಣಗಳು ಮತ್ತು ಕೊರೋನ ವೈರಸ್ ಸಾಂಕ್ರಾಮಿಕವನ್ನು ಅವರು ನಿಭಾಯಿಸುತ್ತಿರುವ ರೀತಿಯಿಂದ ಆಕ್ರೋಶಗೊಂಡಿರುವ ಸಾವಿರಾರು ಇಸ್ರೇಲಿಗರು ಶನಿವಾರ ಜೆರುಸಲೇಮ್‌ನಲ್ಲಿರುವ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ.

‘‘ನಿಮ್ಮ ಸಮಯ ಮುಗಿಯಿತು’’ ಎಂಬುದಾಗಿ ಬೃಹತ್ ಅಕ್ಷರಗಳಲ್ಲಿ ಬರೆದ ಫಲಕವೊಂದನ್ನು ಪ್ರತಿಭಟನಾ ಸ್ಥಳದ ಸಮೀಪದ ಕಟ್ಟಡವೊಂದರಿಂದ ತೂಗುಹಾಕಲಾಗಿತ್ತು. ಇಸ್ರೇಲಿ ಧ್ವಜಗಳನ್ನು ಹಿಡಿದ ಪ್ರದರ್ಶನಕಾರರು, ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಉದ್ಯೋಗಗಳು ಮತ್ತು ಉದ್ಯಮಗಳನ್ನು ರಕ್ಷಿಸಲು ವಿಫಲವಾಗಿರುವುದಕ್ಕಾಗಿ ರಾಜೀನಾಮೆ ನೀಡುವಂತೆ ನೆತನ್ಯಾಹುರನ್ನು ಒತ್ತಾಯಿಸಿದರು.

ನೆತನ್ಯಾಹು ವಿರುದ್ಧದ ಪ್ರತಿಭಟನೆಗಳು ಇತ್ತೀಚಿನ ವಾರಗಳಲ್ಲಿ ತೀವ್ರಗೊಂಡಿವೆ. ತನ್ನ ವಿರುದ್ಧದ ಭ್ರಷ್ಟಾಚಾರ ಪ್ರಕರಣದಿಂದಾಗಿ ಅವರಿಗೆ ಆಡಳಿತದ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅವರ ಟೀಕಾಕಾರರು ಆರೋಪಿಸಿದ್ದಾರೆ. ಆದರೆ, ತನ್ನ ವಿರುದ್ಧದ ಆರೋಪಗಳನ್ನು ನೆತನ್ಯಾಹು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News