ಐಪಿಎಲ್ ಗೂ ಕಾಲಿಡಲಿದೆ ಬಾಬಾ ರಾಮದೇವ್ ರ ಪತಂಜಲಿ?

Update: 2020-08-10 08:32 GMT

ಹೊಸದಿಲ್ಲಿ: ಐಪಿಎಲ್ ಪ್ರಾಯೋಜಕತ್ವದಿಂದ ಚೀನೀ ಮೊಬೈಲ್ ಫೋನ್ ಕಂಪೆನಿ ವಿವೋ ಹಿಂದೆ ಸರಿದ ನಂತರ ಇದೀಗ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಪ್ರಾಯೋಜಕತ್ವ ವಹಿಸಲು ಆಸಕ್ತಿ ತೋರಿಸಿದೆ.

“ನಮ್ಮ ಪತಂಜಲಿ ಬ್ರ್ಯಾಂಡ್‍ ಗೆ ಜಾಗತಿಕ ಮಾರ್ಕೆಟಿಂಗ್ ವೇದಿಕೆ ಒದಗಿಸುವ ಉದ್ದೇಶ ನಮಗಿರುವುದರಿಂದ ಈ ಬಾರಿ ಐಪಿಎಲ್ ಪ್ರಾಯೋಜಕತ್ವ ವಹಿಸುವ ಕುರಿತಂತೆ ಪರಿಶೀಲಿಸುತ್ತಿದ್ದೇವೆ'' ಎಂದು ಪತಂಜಲಿ ಸಂಸ್ಥೆಯ ವಕ್ತಾರ ಎಸ್ ಕೆ ತಿಜಾರವಾಲ ಹೇಳಿದ್ದಾರೆ.

ಐಪಿಎಲ್ ಪ್ರಾಯೋಜಕತ್ವಕ್ಕಾಗಿ ಖ್ಯಾತ ಕಂಪೆನಿಗಳಾದ ಜಿಯೋ, ಅಮೆಝಾನ್, ಟಾಟಾ ಗ್ರೂಪ್ ಹಾಗೂ ಅದಾನಿ ಕೂಡ ಆಸಕ್ತಿ ವಹಿಸಿವೆ ಎನ್ನಲಾಗಿದೆ.

ಭಾರತ ಮತ್ತು ಚೀನಾ ನಡುವೆ ಲಡಾಖಿನ ಗಲ್ವಾನ್ ಕಣಿವೆ ಸಮೀಪ ಜೂನ್ 15ರಂದು ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ  ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಆಗ್ರಹ ಎಲ್ಲೆಡೆ ಕೇಳಿ ಬಂದಿರುವ ನಡುವೆಯೂ ಐಪಿಎಲ್ ಪ್ರಾಯೋಜಕತ್ವವನ್ನು ವೀವೋ ವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿ ಅಂತಿಮವಾಗಿ ಕಂಪೆನಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News