ಲೆಬನಾನ್ ಸರಕಾರದ 4ನೇ ಸಚಿವರ ರಾಜೀನಾಮೆ: ಪತನದಂಚಿಗೆ ಹಸನ್ ದಿಯಾಬ್ ಸರಕಾರ?

Update: 2020-08-10 17:25 GMT
ಹಸನ್ ದಿಯಾಬ್‌ ಫೋಟೊ ಕೃಪೆ: twitter.com/Hassan_B_Diab

ಲೆಬನಾನ್, ಆ. 10:  ಕಳೆದ ವಾರ ರಾಜಧಾನಿ ಬೈರೂತ್ ನಗರವನ್ನು ತಲ್ಲಣಗೊಳಿಸಿದ ಭೀಕರ ಸ್ಫೋಟದ ನೈತಿಕ ಹೊಣೆಯನ್ನು ಹೊತ್ತು ಲೆಬನಾನ್‌ನ ಹಣಕಾಸು ಸಚಿವ ಘಾಝಿ ವಝ್ನಿ ಸೋಮವಾರ ರಾಜೀನಾಮೆ ನೀಡಿದ್ದಾರೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇದು ಲೆಬನಾನ್ ಸಚಿವ ಸಂಪುಟದ ನಾಲ್ಕನೇ ರಾಜೀನಾಮೆಯಾಗಿದೆ.

ಅವರ ರಾಜೀನಾಮೆಯೊಂದಿಗೆ ಪ್ರಧಾನಿ ಹಸನ್ ದಿಯಾಬ್‌ರ ಇಡೀ ಸರಕಾರವೇ ಕುಸಿತದ ಅಂಚಿಗೆ ಬಂದು ನಿಂತಿದೆ. ಜನರು ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News