×
Ad

ಕುಸಿದು ಬಿದ್ದ ಜಾರ್ಖಂಡ್ ಅಸೆಂಬ್ಲಿಯ ಛಾವಣಿ: ನಿರ್ಮಾಣಕ್ಕೆ ತಗಲಿತ್ತು 1,500 ಕೋಟಿ ರೂ.!

Update: 2020-08-11 19:00 IST

ಹೊಸದಿಲ್ಲಿ: ಜಾರ್ಖಂಡ್ ವಿಧಾನಸಭೆಯ ಕಟ್ಟಡ ಒಂದು ಭಾಗದ ಛಾವಣಿ ಕುಸಿದು ಬಿದ್ದಿದೆ. ಕಟ್ಟಡದ ಗ್ರಂಥಾಲಯ ವಿಭಾಗದ ಸೀಲಿಂಗ್ ಕುಸಿದು ಬಿದ್ದಿದ್ದು, ಘಟನೆ ನಡೆದಾಗ ಸ್ಥಳದಲ್ಲಿ ಹೆಚ್ಚು ಜನರಿರಲಿಲ್ಲ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

1,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಕಟ್ಟಡವನ್ನು 2019ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು.

“ಈ ದುರಂತ ನಡೆಯಲು ಜವಾಬ್ದಾರರಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಗ್ರಂಥಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಇರ್ಫಾನ್ ಅನ್ಸಾರಿ ಹೇಳಿದ್ದಾರೆ. ಕೆಲಸವನ್ನು ಸರಿಯಾಗಿ ನಿರ್ವಹಿಸದ ಮತ್ತು ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ ಕಾಂಟ್ರಾಕ್ಟರ್ ಗೆ ಟೆಂಡರ್ ನೀಡಿದ ಹಿಂದಿನ ರಘುಬರ್ ದಾಸ್ ಸರಕಾರವನ್ನು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News