ನನ್ನ ಭಿನ್ನಮತವನ್ನು ‘ದೇಶದ್ರೋಹ’ ಎಂದು ಪರಿಗಣಿಸಲಾಯಿತು: ಶಾ ಫೈಸಲ್

Update: 2020-08-11 16:26 GMT

ಶ್ರೀನಗರ, ಆ. 10: ರಾಜಕೀಯಕ್ಕೆ ಸೇರುವ ಕಳೆದ ವರ್ಷದ ತನ್ನ ನಿರ್ಧಾರದಿಂದ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಉಂಟು ಮಾಡಿದೆ ಎಂದು ಜಮ್ಮು ಹಾಗೂ ಕಾಶ್ಮೀರದ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಮಂಗಳವಾರ ಹೇಳಿದ್ದಾರೆ.

‘‘ಐಎಎಸ್‌ಗೆ ರಾಜೀನಾಮೆ ನೀಡಿದ ಕೂಡಲೇ ನನ್ನ ನಿರುಪದ್ರವಿ ಭಿನ್ನಮತವನ್ನು ದೇಶದ್ರೋಹದ ಕೃತ್ಯವೆಂದು ಪರಿಗಣಿಸಲಾಗುತ್ತಿದೆ ಎಂದು ನನಗೆ ಅರಿವಾಯಿತು’’ ಎಂದು ಅವರು ಹೇಳಿದ್ದಾರೆ.

ಶಾ ಫೈಸಲ್ ಸೋಮವಾರ ಜಮ್ಮು ಹಾಗೂ ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಹಾಗೂ ರಾಜಕೀಯ ತ್ಯಜಿಸಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪರ್ ಆಗಿ ಪಾಸ್ ಆಗುವ ಮೂಲಕ ಫೈಸಲ್ ಈ ರಾಜ್ಯಕ್ಕೆ ಹೆಮ್ಮೆ ತಂದಿದ್ದರು. ಯುವಕರು ಅವರನ್ನು ರೋಲ್ ಮಾಡೆಲ್ ಆಗಿ ಪರಿಗಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News