ನ್ಯೂಝಿಲ್ಯಾಂಡ್: 102 ದಿನಗಳಲ್ಲಿ ಮೊದಲ ಕೊರೋನ ಸೋಂಕು ಪತ್ತೆ

Update: 2020-08-11 16:44 GMT

ವೆಲ್ಲಿಂಗ್ಟನ್, ಆ. 11: ನ್ಯೂಝಿಲ್ಯಾಂಡ್ 102 ದಿನಗಳಲ್ಲಿ ಮೊದಲ ದೇಶೀ ಕೊರೋನ ವೈರಸ್ ಸೋಂಕು ಪ್ರಕರಣವನ್ನು ಮಂಗಳವಾರ ವರದಿ ಮಾಡಿದೆ. ಇದರ ಬೆನ್ನಿಗೇ, ದೇಶದ ಅತಿ ದೊಡ್ಡ ನಗರ ಆಕ್ಲಂಡ್‌ನಲ್ಲಿ ಪ್ರಧಾನಿ ಜಸಿಂದ ಆರ್ಡನ್ ಬೀಗಮುದ್ರೆ ಘೋಷಿಸಿದ್ದು, ಜನರು ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ.

ಆಕ್ಲಂಡ್ ನಗರದ ಕುಟುಂಬವೊಂದರ ನಾಲ್ವರು ಸದಸ್ಯರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ಪ್ರಧಾನಿ ಹೇಳಿದರು. ಆದರೆ, ಅವರಿಗೆ ಎಲ್ಲಿ ಸೋಂಕು ತಗಲಿದೆ ಎನ್ನುವುದು ಪತ್ತೆಯಾಗಿಲ್ಲ.

‘‘ನಾವು ನಿರ್ವಹಿಸಿಕೊಂಡು ಬರುತ್ತಿರುವ ಪ್ರತ್ಯೇಕ ನಿಗಾ ಮತ್ತು ಕ್ವಾರಂಟೈನ್ ಕೇಂದ್ರಗಳ ಹೊರಗೆ, 102 ದಿನಗಳಲ್ಲಿ ದೇಶದ ಮೊದಲ ಕೋವಿಡ್-19 ಪ್ರಕರಣ ವರದಿಯಾಗಿದೆ. ಸಾಂಕ್ರಾಮಿಕವನ್ನು ತಡೆಯಲು ನಾವು ತುಂಬಾ ಕಷ್ಟಪಟ್ಟಿದ್ದೇವೆ ಹಾಗೂ ಈ ಪರಿಸ್ಥಿತಿಗೆ ನಾವು ಸಿದ್ಧರಾಗಿದ್ದೇವೆ ಹಾಗೂ ಅದಕ್ಕಾಗಿ ಯೋಜನೆಯನ್ನು ರೂಪಿಸಿದ್ದೇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News