ಕೊರೋನ ಸೋಂಕು: ಶೇ. 2ಕ್ಕಿಂತಲೂ ಕೆಳಗೆ ಇಳಿದ ಮರಣ ಪ್ರಮಾಣ

Update: 2020-08-11 17:46 GMT

ಹೊಸದಿಲ್ಲಿ, ಆ. 10: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 53,601 ಕೊರೋನ ಸೋಂಕಿನ ಹೊಸ ಪ್ರಕರಣ ಹಾಗೂ 871 ಸಾವು ಸಂಭವಿಸಿದರೂ ಚೇತರಿಕೆ ಪ್ರಮಾಣ ಶೇ. 69.8ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಪರಿಣಾಮಕಾರಿ ಹಾಗೂ ಕ್ಷಿಪ್ರ ವೈದ್ಯಕೀಯ ನಿರ್ವಹಣೆಯಿಂದ ಇದು ಸಾಧ್ಯವಾಯಿತು. ಬೆಳಕಿಗೆ ಬಂದಿರುವ ಕೊರೋನ ಸೋಂಕಿನ ಪ್ರಕರಣದಲ್ಲಿ ಮರಣ ಪ್ರಮಾಣ ನಿರಂತರ ಇಳಿಕೆಯಾಗುತ್ತಿದೆ ಹಾಗೂ ಮರಣದ ಪ್ರಮಾಣ ಮೊದಲ ಬಾರಿಗೆ ಶೇ. 2ಕ್ಕಿಂತಲೂ ಕೆಳಗೆ ಇಳಿಕೆಯಾಗಿದೆ. ಈಗ ಮರಣ ಪ್ರಮಾಣ ಶೇ. 1.99 ದಾಖಲಾಗಿದೆ ಎಂದು ಆರೋಗ್ಯ ಖಾತೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ದೇಶದಲ್ಲಿ ಕೋರೋನ ಸೋಂಕಿತರ ಒಟ್ಟು ಸಂಖ್ಯೆ 22,68,676ಕ್ಕೆ ಏರಿಕೆಯಾಗಿದೆ. ಇದರಲ್ಲಿ 15,83,490 ಮಂದಿ ಚೇರಿಕೆಯಾಗಿದ್ದಾರೆ. ಶೇ. 28.21 (6,39,929) ಮಂದಿಗೆ ಈಗಲೂ ಚಿಕಿತ್ಸೆ ನೀಡಲಾಗುತ್ತಿದೆ. 45,257 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News