ಒಂದೇ ವ್ಯಾನ್‌ನಲ್ಲಿ 12 ಕೋವಿಡ್ ರೋಗಿಗಳ ಶವ: ಅಹಮದ್ ನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ

Update: 2020-08-12 05:41 GMT

ಪುಣೆ, ಆ.12: ಅಹ್ಮದ್‌ನಗರದಲ್ಲಿ ರವಿವಾರ ಕೋವಿಡ್-19ನಿಂದ ಮೃತಪಟ್ಟಿರುವ 12 ಶವಗಳನ್ನು ಒಂದೇ ವ್ಯಾನ್‌ನಲ್ಲಿ ಒಂದರ ಮೇಲೊಂದು ರಾಶಿ ಹಾಕಿ ಅಂತಿಮ ಕ್ರಿಯೆಗಾಗಿ ಶವಾಗಾರಕ್ಕೆ ಕರೆದೊಯ್ಯಲಾಗಿದೆ.

ಈ ಅಮಾನವೀಯ ಕೃತ್ಯಕ್ಕೆ ಅಹ್ಮದ್‌ನಗರದ ರಾಜಕೀಯ ಪಕ್ಷಗಳು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ ಬಳಿಕ ಅಹ್ಮದ್‌ನಗರ ಮಹಾನಗರ ಪಾಲಿಕೆಯು ಘಟನೆಯ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

 ಕೋವಿಡ್-19 ರೋಗಿಗಳ ಶವಗಳನ್ನು ಶವಾಗಾರಕ್ಕೆ ಸಾಗಿಸುವ ಹಾಗೂ ಅದನ್ನು ವಿಲೇವಾರಿ ಮಾಡುವ ಕೆಲಸದ ಮೇಲುಸ್ತುವಾರಿ ವಹಿಸಿಕೊಂಡಿರುವ ನಮ್ಮ ಕ್ಲಾಸ್-4ನೇ ನೌಕರರ ಪೈಕಿ ಓರ್ವನಿಗೆ ನೋಟಿಸ್ ಕಳುಹಿಸಿದ್ದೇವೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಶ್ರೀಕಾಂತ್ ಮಿಚಾಲ್ವಾರ್ ತಿಳಿಸಿದ್ದಾರೆ.

 ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯಲ್ಲಿ ಈ ತನಕ 10,000ಕ್ಕೂ ಅಧಿಕ ಕೊರೋನ ಪಾಸಿಟಿವ್ ಕೇಸ್‌ಗಳು ವರದಿಯಾಗಿದ್ದು, 112 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News