ಅಂಕಿಅಂಶಗಳಿಲ್ಲದೆ ಲಸಿಕೆಯನ್ನು ನಂಬುವುದು ಕಷ್ಟ

Update: 2020-08-12 17:00 GMT

ಲಂಡನ್, ಆ. 12: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಸಿದ್ಧವಾಗಿದೆ ಎಂದು ರಶ್ಯ ಘೋಷಿಸಿದ ಬೆನ್ನಿಗೇ, ಜಾಗತಿಕ ಆರೋಗ್ಯ ಪರಿಣತರು ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಗಿಂತಲೂ ಕಡಿಮೆ ಅವಧಿಯ ಮಾನವ ಪರೀಕ್ಷೆ ಲಸಿಕೆ ಉತ್ಪಾದನೆಗೆ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳ ಸಂಪೂರ್ಣ ಅಂಕಿಅಂಶಗಳಿಲ್ಲದೆ ಲಸಿಕೆಯನ್ನು ನಂಬುವುದು ಕಷ್ಟ ಎಂದು ಅವರು ಹೇಳಿದ್ದಾರೆ.

ಕೋವಿಡ್-19ಕ್ಕೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ಜಾಗತಿಕ ಸ್ಪರ್ಧೆಯಲ್ಲಿ ಮೊದಲಿಗನಾಗಬೇಕೆಂಬ ಉದ್ದೇಶ ಹೊಂದಿರುವ ರಶ್ಯ, ಲಸಿಕೆಯ ಬೃಹತ್ ಪ್ರಮಾಣದ ಪರೀಕ್ಷೆಯನ್ನು ಇನ್ನಷ್ಟೇ ಮಾಡಬೇಕಾಗಿದೆ. ಈ ಪರೀಕ್ಷೆಯಿಂದಷ್ಟೇ, ಲಸಿಕೆ ಪರಿಣಾಮಕಾರಿಯೇ ಎಂಬ ಕುರಿತ ಅಂಕಿಅಂಶಗಳು ಹೊರಬರುತ್ತವೆ ಎಂದು ರೋಗನಿರೋಧತೆ ಮತ್ತು ಸಾಂಕ್ರಾಮಿಕ ರೋಗಗಳ ಪರಿಣತರು ಹೇಳುತ್ತಾರೆ. ಇದು ರಶ್ಯದ ‘ನಿರ್ಲಕ್ಷ್ಯ’ದ ಕ್ರಮವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

‘‘ರಶ್ಯ ವಿಸ್ತತ ನೆಲೆಯಲ್ಲಿ ಲಸಿಕೆಯ ಪರೀಕ್ಷೆಯಲ್ಲಿ ತೊಡಗಿದೆ. ಆದರೆ, ಈಗ ಅತ್ಯಂತ ತ್ವರಿತ ಗತಿಯಲ್ಲಿ ಅದಕ್ಕೆ ಅನುಮೋದನೆ ನೀಡಿದ ಬಳಿಕ, ಅದರ ವ್ಯತಿರಿಕ್ತ ಪರಿಣಾಮಗಳು ಮುಂದಕ್ಕೆ ಗೋಚರಿಸಿದರೂ ಅದನ್ನು ನಿರ್ಲಕ್ಷಿಸಬಹುದಾಗಿದೆ’’ ಎಂದು ಬ್ರಿಟನ್‌ನ ವಾರ್ವಿಕ್ ಬಿಝ್ನೆಸ್ ಸ್ಕೂಲ್‌ನಲ್ಲಿ ಔಷಧ ಸಂಶೋಧನೆಯಲ್ಲಿ ಪರಿಣಿತೆಯಾಗಿರುವ ಅಯ್ಫರ್ ಅಲಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News