ಸಿಬಿಐ ತನಿಖೆಯ ಸುಪ್ರಿಂ ಕೋರ್ಟ್ ಆದೇಶಕ್ಕೆ ಆಕ್ಷೇಪಿಸಲಾರೆ: ರಿಯಾ ಚಕ್ರವರ್ತಿ

Update: 2020-08-13 18:11 GMT

ಹೊಸದಿಲ್ಲಿ, ಆ.13: ಬಿಹಾರ ಸರಕಾರಕ್ಕೆ ತನ್ನ ಹಕ್ಕುಗಳ ಬಗ್ಗೆ ತಿಳಿದಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಕುರಿತು ಕಾನೂನು ಅನುಸರಿಸಲಿದೆ ಎಂದು ನಿತೀಶ್ ಕುಮಾರ್ ಅವರ ಸರಕಾರ ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವು ಕುರಿತು ಅವರ ಕುಟುಂಬ ನಟಿ ರಿಯಾ ಚಕ್ರವರ್ತಿ ವಿರುದ್ಧ ವಂಚನೆ ಹಾಗೂ ಇತರ ಕ್ರಿಮಿಲ್ ಆರೋಪಗಳನ್ನು ದಾಖಲಿಸಿತ್ತು. ಅಲ್ಲದೆ, ಎಫ್‌ಐಆರ್ ಅನ್ನು ಪಾಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಆಗ್ರಹಿಸಿತ್ತು.

ರಿಯಾ ಚಕ್ರವರ್ತಿ ತನ್ನ ಪ್ರತಿಪಾದನೆಯಲ್ಲಿ, ಬಿಹಾರ್ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ಸಂಪೂರ್ಣ ಕಾನೂನು ಬಾಹಿರ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವ ಅಧಿಕಾರ ಅವರಿಗಿಲ್ಲ. ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದರೆ, ಅದಕ್ಕೆ ನನ್ನ ಆಕ್ಷೇಪ ಇಲ್ಲ ಎಂದು ಹೇಳಿದ್ದಾರೆ.

  ರಿಯಾ ಚಕ್ರವರ್ತಿ ಅವರ ಆರೋಪವನ್ನು ಬಿಹಾರ್ ಸರಕಾರ ತಿರಸ್ಕರಿಸಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ತನಿಖೆ ಆರಂಭಿಸಲು ಇದ್ದ ಏಕೈಕ ಮಾರ್ಗ ಎಂದರೆ ಎಫ್‌ಐಆರ್ ದಾಖಲಿಸುವುದು. ಆದರೆ, ಸುಶಾಂತ್ ಸಿಂಗ್ ರಜಪೂತ್ ಅವರು ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿ ಒಂದು ವಾರ ಕಳೆದರೂ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News