ದಿಲ್ಲಿಯ ಗೋಡೌನ್‌ನಲ್ಲಿ ಬೆಂಕಿ ಅವಘಡ

Update: 2020-08-15 09:06 GMT

ಹೊಸದಿಲ್ಲಿ, ಆ.15: ಆಗ್ನೇಯ ದಿಲ್ಲಿಯ ಓಖ್ಲಾ ಪ್ರದೇಶದಲ್ಲಿರುವ ಗೋಡೌನ್‌ನಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 9 ಗಂಟೆಯ ಸುಮಾರಿಗೆ ಬೆಂಕಿ ಹೊತ್ತಿಕೊಂಡ ಮಾಹಿತಿಯು ನಮಗೆ ಲಭಿಸಿತ್ತು ಎಂದು ಅಗ್ನಿಶಾಮಕ ವಿಭಾಗ ತಿಳಿಸಿದೆ.

10 ಅಗ್ನಿಶಾಮಕ ಯಂತ್ರಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ಹೊತ್ತಿಕೊಂಡ ಗೋಡೌನ್ ನಾಲ್ಕು ಮಹಡಿಯ ಕಟ್ಟಡದಲ್ಲಿತ್ತು. ಬೆಂಕಿಯು ಮೊದಲ ಮಾಳಿಗೆಗೆ ಹರಡಿತ್ತು. ಈ ತನಕ ಯಾವುದೇ ಸಾವು-ನೋವು ಉಂಟಾದ ಕುರಿತು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News