ಚಂದಿರನ ಅಂಗಳದಲ್ಲಿ ಕಟ್ಟಡ ನಿರ್ಮಿಸಲು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ ‘ಸ್ಪೇಸ್ ಬ್ರಿಕ್ಸ್’

Update: 2020-08-15 09:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು:  ಚಂದ್ರನ ಅಂಗಳದಲ್ಲಿ ಕಟ್ಟಡಗಳನ್ನು ನಿರ್ಮಿಸಲು ಸಹಕಾರಿಯಾಗುವಂತಹ ಇಟ್ಟಿಗೆಯಂತಹ ವಸ್ತುಗಳನ್ನು ತಯಾರಿಸುವ ಪ್ರಕ್ರಿಯೆಯೊಂದನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್ ಹಾಗೂ ಇಸ್ರೋದ ಸಂಶೋಧಕರ ಒಂದು ತಂಡ ಅಭಿವೃದ್ಧಿ ಪಡಿಸಿದೆ.

ಈ ಇಟ್ಟಿಗೆಯಂತಹ ವಸ್ತು- ಸ್ಪೇಸ್ ಬ್ರಿಕ್ಸ್ - ನಿರ್ಮಾಣಕ್ಕೆ ಯೂರಿಯಾ, ಚಂದಿರನ ಅಂಗಳದಲ್ಲಿರುವ ಮಣ್ಣು ಬಳಸಲಾಗುತ್ತದೆ. ಜತೆಗೆ ಬ್ಯಾಕ್ಟೀರಿಯಾ ಮತ್ತು ಗುವಾರ್ ಬೀನ್ಸ್ ಬಳಸಿ ಮಣ್ಣನ್ನು ಇಟ್ಟಿಗೆಯಂತೆ ಗಟ್ಟಿಗೊಳಿಸಬಹುದಾಗಿದೆ ಎಂದು ಸಂಶೋಧಕರ ತಂಡ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಇಂತಹ ಸ್ಪೇಸ್ ಬ್ರಿಕ್ಸ್ ಗಳನ್ನು ಭವಿಷ್ಯದಲ್ಲಿ ಚಂದಿರನ ಅಂಗಳದಲ್ಲಿ ವಾಸಿಸುವ ಸಲುವಾಗಿ ನಿರ್ಮಾಣ ಕೆಲಸಗಳಿಗಾಗಿ ಬಳಸಬಹುದಾಗಿದೆ,'' ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ನಡೆಸಲಾದ ಎರಡು ಅಧಯ್ಯನಗಳ ವಿವರಗಳು `ಸಿರಾಮಿಕ್ಸ್ ಇಂಟರ್ ನ್ಯಾಷನಲ್' ಹಾಗೂ `ಪಿಎಲ್‍ಒಎಸ್ ಒನ್' ಎಂಬ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಈ ಇಟ್ಟಿಗೆಗಳ ನಿರ್ಮಾಣಕ್ಕಾಗಿ ಯೂರಿಯಾ ಮತ್ತು ಚಂದ್ರನ ಮಣ್ಣು ಮೂಲ ವಸ್ತುಗಳಾಗಿ ಬಳಸಲಾಗಿದೆ ಇದು ನಿರ್ಮಾಣ ವೆಚ್ಚಗಳನ್ನು ಬಹಳಷ್ಟು ಕಡಿಮೆಗೊಳಿಸಬಹುದಾಗಿದೆ. ಸಾಮಾನ್ಯವಾಗಿ ಬಾಹ್ಯಾಕಾಶಕ್ಕೆ ಒಂದು ಪೌಂಡ್ ತೂಕದ ಸಾಮಗ್ರಿ ಕಳುಹಿಸಲು ಆಗುವ ವೆಚ್ಚ ರೂ. 7.5 ಲಕ್ಷ ಆಗಿರುವುದರಿಂದ ಇಂತಹ ಒಂದು ತಂತ್ರಜ್ಞಾನ ಹೆಚ್ಚು ಪ್ರಯೋಜನಕಾರಿ ಮೇಲಾಗಿ ಅದು ಸಿಮೆಂಟ್ ಬದಲು ಗುವಾರ್ ಗಮ್ ಬಳಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News