ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿಯಾದ ಆಮಿರ್ ಖಾನ್ ವಿರುದ್ಧ ಮುಗಿಬಿದ್ದ ಕೇಸರಿ ಟ್ರೋಲ್ ಗಳು

Update: 2020-08-17 16:59 GMT

ಹೊಸದಿಲ್ಲಿ: ಟರ್ಕಿಯ ಪ್ರಥಮ ಮಹಿಳೆ ಎಮಿನೆ ಎರ್ದೊಗಾನ್ ರನ್ನು ಭೇಟಿಯಾದ ಬಾಲಿವುಡ್ ನಟ ಆಮಿರ್ ಖಾನ್ ವಿರುದ್ಧ ಕೇಸರಿ ಟ್ರೋಲ್ ಗಳು ಮುಗಿಬಿದ್ದಿವೆ.

“ಭಾರತ ವಿರೋಧಿ ನಿಲುವು ಹೊಂದಿರುವ ಕೆಲವು ವ್ಯಕ್ತಿಗಳನ್ನು ನಟರು ಭೇಟಿಯಾಗುತ್ತಿದ್ದಾರೆ. ಟರ್ಕಿಯ ಪ್ರಥಮ ಮಹಿಳೆಯನ್ನು ಭೇಟಿಯಾಗುವುದು ಹೆಮ್ಮೆ ಎನ್ನುವ ನಟರ ಹಿಂದೆ ಬೇರೇನೋ ಇದೆ” ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಅಲೋಕ್ ಕುಮಾರ್ ಹೇಳಿದ್ದಾರೆ.

ಲಾಲ್ ಸಿಂಗ್ ಛಡ್ಡಾ ಚಿತ್ರಕ್ಕೆ ಸಂಬಂಧಿಸಿ ಟರ್ಕಿಗೆ ತೆರಳಿದ್ದ ಆಮಿರ್ ಖಾನ್ ಟರ್ಕಿಯ ಪ್ರಥಮ ಮಹಿಳೆ ಎಮಿನೆ ಎರ್ದೊಗಾನ್ ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

“ಭಾರತದ ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸಿ, ನಟರಾಗಿ ಸ್ವೀಕರಿಸದ ವ್ಯಕ್ತಿಗಳು ಭಾರತ ವಿರೋಧಿ ಟರ್ಕಿಗೆ ಭೇಟಿ ನೀಡಿದ್ದನ್ನು ಹೆಮ್ಮೆ ಅಂದುಕೊಳ್ಳುತ್ತಾರೆ” ಎಂದು ಮತ್ತೊಬ್ಬ ವಿಎಚ್ ಪಿ ನಾಯಕ ಹೇಳಿದ್ದಾರೆ.

ಟ್ವಿಟರ್ ನಲ್ಲಿ ಹಲವು ಕೇಸರಿ ಟ್ರೋಲ್ ಗಳು ಲಾಲ್ ಸಿಂಗ್ ಛಡ್ಡಾ ಚಿತ್ರದ ಟ್ರೈಲರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಡಿಸ್ ಲೈಕ್ ಮಾಡಲು ಕರೆ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News