×
Ad

ಫ್ರಾನ್ಸ್‌ನ ಎಮಿಲಿ ಗಿಮೆಟ್ ಸಾಹಿತ್ಯ ಪ್ರಶಸ್ತಿಗೆ ಪೈಪೋಟಿಯಲ್ಲಿ ಭಾರತದ ಇಬ್ಬರು ಲೇಖಕರು

Update: 2020-08-19 23:34 IST

ಹೊಸದಿಲ್ಲಿ,ಆ.19: ಫ್ರಾನ್ಸ್‌ನ ಪ್ರತಿಷ್ಠಿತ ಎಮಿಲಿ ಗಿಮೆಟ್ ಪುರಸ್ಕಾರ 2020ರ ಲಾಂಗ್‌ಲಿಸ್ಟ್‌ನಲ್ಲಿ ಭಾರತೀಯ ಕಾದಂಬರಿಕಾರರಾದ ಮನು ಜೋಸೆಫ್ ಮತ್ತು ಪ್ರಜ್ವಲ್ ಪರಜುಲೆ ಅವರು ಸ್ಥಾನ ಪಡೆದಿದ್ದಾರೆ.

ಪ್ಯಾರಿಸ್‌ನ ಎಮಿಲಿ ಗಿಮೆಟ್ ಮ್ಯೂಝಿಯಂ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಪ್ರತಿವರ್ಷ ಫ್ರೆಂಚ್ ಭಾಷೆಗೆ ತರ್ಜುಮೆಗೊಂಡ ಏಷಿಯನ್ ಲೇಖಕರ ಪುಸ್ತಕವೊಂದಕ್ಕೆ ನೀಡಲಾಗುತ್ತದೆ.

ಪರಜುಲೆ ಅವರು ತನ್ನ ‘ಲ್ಯಾಂಡ್ ವ್ಹೇರ್ ಐ ಫ್ಲೀ’ ಕಾದಂಬರಿಗಾಗಿ ಮತ್ತು ದಿಲ್ಲಿಯ ಪತ್ರಕರ್ತ ಹಾಗೂಲೇಖಕ ಜೋಸೆಫ್ ಅವರು ತನ್ನ ‘ಮಿಸ್ ಲೈಲಾ ಆರ್ಮ್ಡ್ ಆ್ಯಂಡ್ ಡೇಂಜರಸ್’ ಕೃತಿಗಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ‘ದಿ ರನ್‌ವೇಸ್’ ಪುಸ್ತಕದೊಂದಿಗೆ ಪಾಕಿಸ್ತಾನಿ ಲೇಖಕಿ ಫಾತಿಮಾ ಭುಟ್ಟೋ ಅವರೂ ಈ ಪಟ್ಟಿಯಲ್ಲಿ ಸೇರಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಎಮಿಲೆ ಗಿಮೆಟ್ ಮ್ಯೂಝಿಯಮ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News