×
Ad

ಹೈದರಾಬಾದ್: 1 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾದ ಇಲಿ!

Update: 2020-08-21 23:35 IST

ಹೈದರಾಬಾದ್: ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಹೈದರಾಬಾದ್ ನ ಮುಶೀರಾಬಾದ್ ನ ಕಾರ್ ಸರ್ವಿಸ್ ಸೆಂಟರ್ ನಲ್ಲಿ ಭಾರೀ ಅಗ್ನಿ ಅನಾಹುತವೊಂದು ಸಂಭವಿಸಿತ್ತು. ಘಟನೆಯಲ್ಲಿ ಮೂರು ಕಾರುಗಳು ಸುಟ್ಟು ಭಸ್ಮವಾಗಿದ್ದು, ಸುಮಾರು 1 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿತ್ತು. ಇದೀಗ ಘಟನೆ ನಡೆದು 6 ತಿಂಗಳ ಬಳಿಕ ಈ ಘಟನೆಗೆ ಕಾರಣವಾದದ್ದು ಒಂದು ಇಲಿ ಎನ್ನುವುದು ಬೆಳಕಿಗೆ ಬಂದಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ನಡೆದ ಅನಾಹುತ ಎಂದು ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಸಿದ್ದ ಖಾಸಗಿ ಫೊರೆನ್ಸಿಕ್ ಏಜೆನ್ಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿತ್ತು.

ಫೆಬ್ರವರಿ 7ರಂದು ಕಚೇರಿಯಲ್ಲಿ ಪೂಜಾ ಕಾರ್ಯಕ್ರಮವೊಂದು ನಡೆದಿದ್ದು, ಉದ್ಯೋಗಿಯೊಬ್ಬರು ದೀಪವನ್ನು ಹಿಡಿದಿದ್ದರು. ಕೋಣೆಗೆ ಗಾಳಿ ಅಷ್ಟೇನೂ ಬಾರದ ಕಾರಣದಿಂದಾಗಿ ರಾತ್ರಿವರೆಗೆ ದೀಪ ಉರಿಯುತ್ತಿತ್ತು. ರಾತ್ರಿ ಸುಮಾರು 11:51ರ ವೇಳೆಗೆ ಇಲಿಯೊಂದು ಆ ದೀಪವನ್ನು ಕೆಳಕ್ಕೆ ಬೀಳಿಸಿ ಓಡಾಡಿತ್ತು. ದೀಪ ಕೆಳಕ್ಕೆ ಬಿದ್ದು ಕುರ್ಚಿಗೆ ಬೆಂಕಿ ಹತ್ತಿಕೊಂಡಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News