×
Ad

ಗುರುಗಾಂವ್: ನಿರ್ಮಾಣ ಹಂತದ 6 ಕಿ.ಮೀ. ಉದ್ದದ ಮೇಲ್ಸೇತುವೆ ಕುಸಿತ

Update: 2020-08-23 09:20 IST

ಗುರುಗಾಂವ್, ಆ.23: ನಿರ್ಮಾಣ ಹಂತದಲ್ಲಿದ್ದ ಆರು ಕಿಲೋಮೀಟರ್ ಉದ್ದದ ಮೇಲ್ಸೇತುವೆ ಶನಿವಾರ ರಾತ್ರಿ ಭಾಗಶಃ ಕುಸಿದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದಾ ಗಿಜಿಗಿಡುತ್ತಿದ್ದ ಸೋನಾ ರೋಡ್ ಸ್ಥಳವನ್ನು ಮುಚ್ಚಿದ್ದು, ರಾಶಿ ಬಿದ್ದಿರುವ ಕಾಂಕ್ರೀಟ್ ಬ್ಲಾಕ್‌ಗಳನ್ನು ತೆಗೆಯಲು ಬೃಹತ್ ಯಂತ್ರಗಳು ಹಗಲು- ರಾತ್ರಿ ಕಾರ್ಯ ನಿರ್ವಹಿಸುತ್ತಿವೆ.

ಫ್ಲೈ ಓವರ್ ಕುಸಿದು ಬಿದ್ದ ಸುಮಾರು 10 ಮೀಟರ್ ದೂರದಲ್ಲಿ ಕಾರುಗಳು ಚಲಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಗುರುಗಾಂವ್‌ನ ಸೋನ್ಹಾ ರೋಡ್‌ನ ಎತ್ತರಿಸಿದ ಕಾರಿಡಾರ್ ಸ್ಲ್ಯಾಕ್ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್‌ಎಚ್‌ಎಐ ತಂಡ, ಎಸ್‌ಡಿಎಂ ಮತ್ತು ನಾಗರಿಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ಹರ್ಯಾಣ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಖಾತೆ ಸಚಿವ ದುಷ್ಯಂತ್ ಚೌಟಾಲಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News