ಭಾರತದಲ್ಲಿ 30 ಲಕ್ಷ ಗಡಿ ದಾಟಿದ ಕೊರೋನ ವೈರಸ್ ಪ್ರಕರಣ
ಹೊಸದಿಲ್ಲಿ, ಆ.23: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 69,239 ಹೊಸ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ.ಈ ಮೂಲಕ ಒಟ್ಟು ಕೊರೋನ ಸೋಂಕಿತರ ಸಂಖ್ಯೆಯು 30,44,940ಕ್ಕೇರಿಕೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರವಿವಾರ ಬೆಳಗ್ಗೆ ತಿಳಿಸಿದೆ.
ಸುಮಾರು 22,80,566 ಲಕ್ಷ ಜನರು ಕೊರೋನದಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್‌ಗೆ ಸಂಬಂಧಿಸಿ 56,706 ಜನರು ಸಾವನ್ನಪ್ಪಿದ್ದಾರೆ. ನಿನ್ನೆಯಿಂದ 912 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಡಾಟಾದಿಂದ ತಿಳಿದುಬಂದಿದೆ.
ಇಂದು ಬೆಳಗ್ಗೆ ಚೇತರಿಕೆಯ ದರ ಶೇ.74.89ರಷ್ಟಿದೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಕೊರೋನ ಪ್ರಕರಣಗಳಿರುವ ದೇಶಗಳ ಪೈಕಿ ಭಾರತವು ಬ್ರೆಝಿಲ್ ಹಾಗೂ ಅಮೆರಿಕದ ಬಳಿಕದ ಸ್ಥಾನದಲ್ಲಿವೆ. 206 ದೈನಂದಿನ ಪ್ರಕರಣಗಳು ದಾಖಲಾದ ತಕ್ಷಣ ಒಟ್ಟು ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 30 ಲಕ್ಷ ದಾಟಿದೆ. 20 ಲಕ್ಷ ಗಡಿ ದಾಟಿದ ಕೇವಲ 16 ದಿನಗಳಲ್ಲಿ 30 ಲಕ್ಷ ಗಡಿ ದಾಟಿದೆ. ಆಗಸ್ಟ್ 17ರಂದು ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಕೊರೋನ ಕೇಸ್‌ಗಳು ದಾಖಲಾಗಿದ್ದವು.