ಸುಶಾಂತ್ ಸಿಂಗ್ ಗೆ ನೀಡಿದ್ದ ಗಾಂಜಾ ಸಿಗರೇಟು ಪೆಟ್ಟಿಗೆಯಲ್ಲಿ ಇರಲಿಲ್ಲ: ಮನೆಕೆಲಸದಾಳು ನೀರಜ್ ಸಿಂಗ್

Update: 2020-08-23 12:37 GMT

ಹೊಸದಿಲ್ಲಿ: ಆತ್ಮಹತ್ಯೆಗೆ ಶರಣಾಗಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗಾಂಜಾ ಸೇದುತ್ತಿದ್ದರು ಎಂದು ಅವರ ಮನೆಕೆಲಸದಾಳು ನೀರಜ್ ಸಿಂಗ್ ಹೇಳಿರುವುದಾಗಿ indiatoday.in ವರದಿ ಮಾಡಿದೆ.

ಮುಂಬೈ ಪೊಲೀಸರ ಮುಂದೆ ಹೇಳಿಕೆ ನೀಡಿರುವ ನೀರಜ್ ಸಿಂಗ್, ಸುಶಾಂತ್ ಸಿಂಗ್ ಸಾವಿಗೆ ಕೆಲ ದಿನಗಳ ಮೊದಲು ತಾನು ಸುಶಾಂತ್ ರಿಗೆ ಗಾಂಜಾ ಸಿಗರೇಟನ್ನು ರೋಲ್ ಮಾಡಿ ನೀಡಿದ್ದೆ. ಸುಶಾಂತ್ ಸಿಂಗ್ ನಿಧನದ ಬಳಿಕ ಜೂನ್ 14ರಂದು ಪೆಟ್ಟಿಗೆಯನ್ನು ನೋಡಿದಾಗ ಅದು ಖಾಲಿಯಾಗಿತ್ತು ಎಂದು ಹೇಳಿದ್ದಾರೆ.

“2019ರ ಎಪ್ರಿಲ್ ನಿಂದ ನಾನು ಮನೆಕೆಲಸದಾಳು ಆಗಿದ್ದೆ. ಸುಶಾಂತ್ ಸಿಂಗ್ ಸರ್ ಗೆ ತಿಳಿದಿದ್ದ ಮತ್ತೊಬ್ಬ ವ್ಯಕ್ತಿಯ ಶಿಫಾರಸಿನ ಕಾರಣ ನಾನು ಕೆಲಸಕ್ಕೆ ಬಂದೆ. ನನಗೆ ಇಲ್ಲಿ ಕೆಲಸ ಸಿಕ್ಕಿತು. ನನಗೆ ಕೆಲ ಸಮಯ ಅನಾರೋಗ್ಯ ಕಾಡಿತು. ನಂತರ ಕೆಲಸ ಬಿಟ್ಟೆ. ಮತ್ತೊಮ್ಮೆ ಕೆಲ ದಿನಗಳ ಬಳಿಕ ಕೆಲಸಕ್ಕೆ ಸೇರಿಕೊಂಡೆ. 2019ರ ಮೇ ತಿಂಗಳಲ್ಲಿ ಸುಶಾಂತ್ ರ ಮ್ಯಾನೇಜರ್ ಸ್ಯಾಮುವೆಲ್  ಮಿರಾಂಡಾ ಕರೆ ಮಾಡಿ ಕೆಲಸಕ್ಕೆ ಸೇರುವಂತೆ ಹೇಳಿದ್ದರು”

“ನಾನು ಸ್ವಚ್ಛತೆ, ಆಹಾರ ವಿತರಣೆ ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆ. ಕ್ಯಾಪ್ರಿ ಹೈಟ್ಸ್ ಮಾರ್ಕೆಟ್ ರೆಸಿಡೆನ್ಸಿಯಲ್ಲಿ ನಾನು ಕೆಲಸ ಮಾಡುತ್ತಿದ್ದೆ. ನಂತರ ಮೌಂಟ್ ಬ್ಲ್ಯಾಂಕ್ ಗೆ ಸ್ಥಳಾಂತರಗೊಂಡೆವು. ಕ್ಯಾಪ್ರಿ ಹೈಟ್ಸ್ ಫ್ಲ್ಯಾಟ್ ನಲ್ಲಿ ನಾವು ಇರುವಾಗ ನಮಗೆ ವಾಕಿಟಾಕಿ ಸೆಟ್ ಗಳನ್ನು ನೀಡಲಾಗಿತ್ತು. ವಾಕಿಟಾಕಿ ಮೂಲಕವೇ ಅವರು ನಮಗೆ ಕೆಲಸಗಳನ್ನು ಹೇಳುತ್ತಿದ್ದರು. ನಾನೊಮ್ಮೆ ಮಲಗಿದ್ದಾಗ ‘ನೀರಜ್ ಬೆಳಕು ನಂದಿಸು’ ಎನ್ನುವ ಧ್ವನಿ ಕೇಳಿಸಿತು. ನಾನು ಸುಶಾಂತ್ ಸರ್ ಬೆಡ್ ರೂಮ್ ಹತ್ತಿರ ಹೋಗಿ ನೋಡಿದಾಗ ಅವರು ಮಲಗಿದ್ದರು. ಕೆಲ ಸಮಯದ ಬಳಿಕ ಅದೇ ರೀತಿಯ ಶಬ್ಧ ಕೇಳಿಸಿತು. ಆಗಲೂ ಬೆಳಕು ಆರಿತ್ತು ಮತ್ತು ಅವರು ಮಲಗಿದ್ದರು. ನನಗೆ ಭಯವಾಯಿತು. ಆ ರಾತ್ರಿ ನಿದ್ರೆ ಬರಲಿಲ್ಲ. ನಾವು ಅಲ್ಲಿದ್ದಾಗ ನಮಗೆ ಲಿಫ್ಟ್ ಮೇಲೆ ಕೆಳಗೆ ಹೋಗುವ, ಡ್ರಮ್ ಗಳನ್ನು ಬಡಿಯುವ ಶಬ್ಧ ಕೇಳಿಸುತ್ತಿತ್ತು. ಅದೇ ಕಾರಣದಿಂದ ಸುಶಾಂತ್ ಸರ್ ವಾಟರ್ ಸ್ಟೋನ್ಸ್ ಗೆ ಸ್ಥಳಾಂತರಗೊಂಡರು” ಎಂದು ನೀರಜ್ ಹೇಳಿದ್ದಾಗಿ ವರದಿ ಮಾಡಿದೆ.

“ಮನೆಯಲ್ಲಿ ಸುಶಾಂತ್ ವಾರಕ್ಕೆ ಒಂದೆರಡು ಬಾರಿ ಆನಂದಿ, ರಿಯಾ ಮತ್ತು ಆಯುಷ್ ಜೊತೆ ಪಾರ್ಟಿ ನಡೆಸುತ್ತಿದ್ದರು. ಅವರು ಮದ್ಯ ಸೇವಿಸುತ್ತಿದ್ದರು ಮತ್ತು ಗಾಂಜಾ ಸಿಗರೇಟು ಸೇದುತ್ತಿದ್ದರು. ಸುಶಾಂತ್ ಗಾಗಿ ಸ್ಯಾಮುವೆಲ್ ಜಾಕೋಬ್ ಗಾಂಜಾ ರೋಲ್ ಮಾಡುತ್ತಿದ್ದರು. ಕೆಲವೊಮ್ಮೆ ನಾನೂ ರೋಲ್ ಮಾಡುತ್ತಿದ್ದೆ. ಸುಶಾಂತ್ ಆತ್ಮಹತ್ಯೆಗೈಯುವ ಮೊದಲು ನಾನು ಗಾಂಜಾ ಸಿಗರೇಟುಗಳನ್ನು ನಾನು ರೋಲ್ ಮಾಡಿ ನೀಡಿದ್ದೆ. ಅದನ್ನು ಸಿಗರೇಟ್ ಕೇಸ್ ನಲ್ಲಿ ಇರಿಸಲಾಗಿತ್ತು. ಸುಶಾಂತ್ ಸರ್ ಆತ್ಮಹತ್ಯೆಯ ನಂತರ ನಾನು ನೋಡಿದಾಗ ಗಾಂಜಾ ಸಿಗರೇಟುಗಳ ಪೆಟ್ಟಿಗೆ ಖಾಲಿಯಾಗಿತ್ತು” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News