ಬಹುಮಹಡಿಗಳ ಕಟ್ಟಡ ಕುಸಿತ: 15 ಮಂದಿಗೆ ಗಾಯ, 70ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ
Update: 2020-08-24 20:17 IST
ಮಹಾರಾಷ್ಟ್ರ: ಬಹುಮಹಡಿಗಳ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 15 ಮಂದಿ ಗಾಯಗೊಂಡಿದ್ದು, 70ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಮಹಾರಾಷ್ಟ್ರದ ರಾಯಘಡದಲ್ಲಿ ನಡೆದಿದೆ.
ಘಟನಾ ಸ್ಥಳಕ್ಕೆ ಮೂರು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ ಡಿಆರ್ ಎಫ್) ಧಾವಿಸಿದೆ.
“ಇದು ಸಂಜೆ ನಾಲ್ಕು ಮಹಡಿಗಳ ಕಟ್ಟಡವೊಂದು ಕಾಜಲ್ಪುರ ಪ್ರದೇಶದಲ್ಲಿ ಕುಸಿದು ಬಿದ್ದಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ” ಎಂದು ಎನ್ ಡಿಆರ್ ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.