ಪರೀಕ್ಷಾ ಹಂತದಲ್ಲಿ ಭಾರತದ ಮೂರು ಕೊರೋನ ಲಸಿಕೆಗಳು : ಐಸಿಎಂಆರ್

Update: 2020-08-25 17:47 GMT

ಹೊಸದಿಲ್ಲಿ,ಆ.25: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನ ವೈರಸ್ ಸೋಂಕಿನ ವಿರುದ್ಧ ಅಸ್ತ್ರವಾಗಿ ಭಾರತದಲ್ಲಿ ಮೂರು ಲಸಿಕೆಗಳು ತಯಾರಾಗುತ್ತಿದ್ದು, ಅವು ಪ್ರಾಯೋಗಿಕ ಪರೀಕ್ಷಾ ಹಂತವನ್ನು ತಲುಪಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧ ನಾ ಮಂಡಳಿ (ಐಸಿಎಂಆರ್) ಮಂಗಳವಾ ತಿಳಿಸಿದೆ.

ಸರಕಾರದ ಕೋವಿಡ್19 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್‌ನ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು, ಭಾರತದಲ್ಲಿ ಮೂರು ಲಸಿಕೆಗಳು, ಕೊರೋನಾ ಔಷಧಿ ತಯಾರಿಕೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿವೆಯೆಂದು ಅವರು ಹೇಳಿದರು.

 ಭಾರತದಲ್ಲಿ ಸೆರಂ ಇನ್ಸ್‌ಟಿಟ್ಯೂಟ್ ತಯಾರಿಸುತ್ತಿರುವ ಆಕ್ಸ್‌ಫರ್ಡ್ ವಿವಿ ಲಸಿಕೆ, ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಹಾಗೂ ಝೈಡಸ್ ಕ್ಯಾಡಿಲ್ಲಾ ಝೈಕೊವ್-ಡಿ ಇವು ಭರವಸೆ ಮೂಡಿಸಿರುವ ಮೂರು ಕೊರೋನ -19 ಲಸಿಕೆಗಳಾಗಿವೆ ಹೇಳಿದ್ದಾರೆ.

ಸೆರಂ ಇನ್ಸ್‌ಟಿಟ್ಯೂಟ್‌ನ ಲಸಿಕೆಯು ಪರೀಕ್ಷೆಯ ಎರಡನೇ (ಬಿ) ಹಾಗೂ ಮೂರನೆ ಹಂತದಲ್ಲಿವೆ. 1700 ಮಂದಿ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಭಾರತ್ ಬಯೋಟೆಕ್ ಎರಡನೆ ಹಂತದ ಪರೀಕ್ಷೆಯನ್ನು ಆರಂಭಿಸಿದೆ ಹಾಗೂ ಝೈಡಸ್ ಕ್ಯಾಡಿಲಾ ಕಂಪೆನಿಯ ಲಸಿಕೆಯು 2 ಹಂತವನ್ನು ಪೂರ್ಣಗೊಳಿಸಿದ್ದು, ಈಗಾಗಲೇ 50 ಮಂದಿ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.

   ಭಾರತದಲ್ಲಿ ಈಗಾಗಲೇ ಕನಿಷ್ಠ 1750 ಮಂದಿ ಕೊರೋನ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಎರಡನೆ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ಸಂಖ್ಯೆಯು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ವಿಶ್ವದಾದ್ಯಂತ ಹಲವಾರು ಕೋವಿಡ್-19 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪೈಕಿ ರಶ್ಯದ ಸ್ಫುಟ್ನಿಕ್ ಪ್ರಮುಖವಾದುದು. ಈ ಲಸಿಕೆಯು ಪ್ರಾಯೋಗಿಕ ಪರೀಕ್ಷೆಯ ಎಲ್ಲಾ ಹಂತಗಳನ್ನು ಹಾದುಹೋಗದಿದ್ದರೂ ಅದಕ್ಕೆ ರಶ್ಯ ಸರಕಾರ ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News