ಇರಾನ್ ವಿರುದ್ಧ ದಿಗ್ಬಂಧನ ವಿಧಿಸುವ ಅಮೆರಿಕ ಯತ್ನಕ್ಕೆ ಭದ್ರತಾ ಮಂಡಳಿ ತಡೆ

Update: 2020-08-26 16:55 GMT

ವಿಶ್ವಸಂಸ್ಥೆ, ಆ. 26: ಇರಾನ್ ವಿರುದ್ಧ ಅಂತರ್‌ರಾಷ್ಟ್ರೀಯ ದಿಗ್ಬಂಧನಗಳನ್ನು ಮರುವಿಧಿಸುವ ಅವೆುರಿಕದ ವಿವಾದಸ್ಪದ ಪ್ರಯತ್ನವೊಂದಕ್ಕೆ ವಿಶ್ವಸಂಸ್ಥೆ ಮಂಗಳವಾರ ತಡೆ ಹಾಕಿದೆ. ಈ ವಿವಾದಾಸ್ಪದ ಕ್ರಮವನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿದೆ.

ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಆಗಸ್ಟ್ ತಿಂಗಳಲ್ಲಿ ಇಂಡೋನೇಶ್ಯ ವಹಿಸಿಕೊಂಡಿದ್ದು, ವಾಶಿಂಗ್ಟನ್‌ನ ಮನವಿಗೆ ಸಂಬಂಧಿಸಿ ‘‘ಮುಂದಿನ ಕ್ರಮವನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ’’ ಭದ್ರತಾ ಮಂಡಳಿಯ ಅಧ್ಯಕ್ಷತೆ ಇಲ್ಲ ಎಂದು ಇಂಡೋನೇಶ್ಯದ ರಾಯಭಾರಿ ದಿಯಾನ್ ಟ್ರಿಯಾನ್‌ಸ್ಯಾ ಡಜನಿ ಹೇಳಿದರು.

ಅಮೆರಿಕದ ಉಪಕ್ರಮಕ್ಕೆ ವಿಶ್ವಸಂಸ್ಥೆಯ ಅತ್ಯುನ್ನತ ವೇದಿಕೆಯಲ್ಲಿ ಒಮ್ಮತದ ಕೊರತೆಯಿರುವುದು ಇದಕ್ಕೆ ಮುಖ್ಯ ಕಾರಣ ಎಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News