ಭಾರೀ ಮಳೆ: ಉದ್ಘಾಟನೆಗೆ ಮೊದಲೇ ಕುಸಿದು ಬಿದ್ದ 3.7 ಕೋಟಿ ರೂ. ವೆಚ್ಚದ ಸೇತುವೆ

Update: 2020-08-30 16:20 GMT
Photo: ndtv.com

ಭೋಪಾಲ: ಮಧ್ಯಪ್ರದೇಶದ ರಾಜಧಾನಿ ಭೋಪಾಲದಿಂದ 300 ಕಿ.ಮೀ. ದೂರದಲ್ಲಿರುವ ವೈಂಗಂಗಾ ನದಿಗೆ ನಿರ್ಮಿಸಲಾದ ಹೊಸ ಸೇತುವೆಯೊಂದು ಉದ್ಘಾಟನೆಗೆ ಮೊದಲೇ ಭಾರೀ ಮಳೆಗೆ ಕುಸಿದು ಬಿದ್ದಿದೆ.

ಕೊನೆಯ ದಿನಾಂಕಕ್ಕಿಂತ ಮೊದಲೇ ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದು, 150 ಮೀ. ಉದ್ದದ ಈ ಸೇತುವೆಯನ್ನು ಗ್ರಾಮಸ್ಥರು ಬಳಸಲು ಆರಂಭಿಸಿದ್ದರು.

ನಿನ್ನೆ ಸುರಿದ ಭಾರೀ ಮಳೆಯಿಂದ ಸೇತುವೆಯ ದೊಡ್ಡ ಭಾಗವೊಂದು ಕುಸಿದು ಬಿದ್ದಿದೆ. ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ 3.7 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News